ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಸಂದರ್ಭದಲ್ಲೇ ಹೆಸರು ಹೇಳಲಿಚ್ಛಿಸದ ಭಕ್ತರೊಬ್ಬರು ಗುಂಟ ದೀಪವನ್ನು ನೀಡಿದ್ದಾರೆ.

ಶನಿವಾರ ಸಂಜೆ ಭಕ್ತರ ಕುಟುಂಬಸ್ಥರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಪ್ರಜ್ವಲನೆ ಮಾಡಲಾಯಿತು.
ಕಲಬೆರಕೆ ಎಳ್ಳೆಣ್ಣೆ ದೇವರ ದೀಪಕ್ಕೆ ಸುರಿಯದೇ ಇನ್ನು ಮುಂದಕ್ಕೆ ಭಕ್ತರು ದೇವಾಲಯದಿಂದಲೇ ಗುಣಮಟ್ಟದ ಎಳ್ಳೆಣ್ಣೆ ಪಡೆದು ದೀಪಕ್ಕೆ ಸುರಿಯುವ ಮೂಲಕ ಧಾರ್ಮಿಕ ಆಚರಣೆಯನ್ನು ಶುದ್ಧ ರೀತಿಯಿಂದ ಆಚರಿಸಬೇಕೆಂಬುದು ಭಕ್ತರ ಆಶಯವಾಗಿದೆ ಎಂದು ದೀಪ ಕೊಡುಗೆ ನೀಡಿದವರ ಪ್ರಾರ್ಥನೆಯಾಗಿದೆ..




























