ಪುತ್ತೂರು: ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ರಿ. ಬಲ್ನಾಡು, ವಿನಾಯಕ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಬಲ್ನಾಡು ವತಿಯಿಂದ, 8ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ‘ವಿನಾಯಕ ಟ್ರೋಫಿ-2023’ ಪುರುಷರ ಮುಕ್ತ ಹಾಗೂ ಬಲ್ನಾಡು ಗ್ರಾಮ ಮಟ್ಟದ ಪ್ರೊ ಮಾದರಿಯ ಮ್ಯಾಟ್ ಅಂಕಣದಲ್ಲಿ ‘ಕಬಡ್ಡಿ ಪಂದ್ಯಾಟ’ ಫೆ.12 ರಂದು ಬೆಳಿಗ್ಗೆ 9 ಗಂಟೆಯಿಂದ ಬಲ್ನಾಡು ಉಜ್ರುಪಾದೆ ವಿನಾಯಕ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜ್ಯೋತಿಷ್ಯರಾದ ಬಾಲಕೃಷ್ಣ ಆಚಾರ್ ಕಾರಿಂಜ ರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ವಹಿಸಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಸಂಜೀವ ಮಠಂದೂರು ರವರು ವಹಿಸಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಮುಕ್ತ ಕಬಡ್ಡಿ ಪಂದ್ಯಾಟದ ಬಹುಮಾನ :
ಪ್ರಥಮ ಬಹುಮಾನ – 10,023 ಮತ್ತು ವಿನಾಯಕ ಟ್ರೋಫಿ, ದ್ವಿತೀಯ ಬಹುಮಾನ – 7,023 ಮತ್ತು ವಿನಾಯಕ ಟ್ರೋಫಿ, ತೃತೀಯ ಬಹುಮಾನ – 4,023 ಮತ್ತು ವಿನಾಯಕ ಟ್ರೋಫಿ, ಚತುರ್ಥ ಬಹುಮಾನ – 4,023 ಮತ್ತು ವಿನಾಯಕ ಟ್ರೋಫಿ ಹಾಗೂ ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ಬಹುಮಾನ ನೀಡಲಾಗುವುದು.
ಬಲ್ನಾಡು ವಲಯ ಮಟ್ಟದ ಕಬಡ್ಡಿ ಪಂದ್ಯಾಟದ ಬಹುಮಾನಗಳು :
ಪ್ರಥಮ ಬಹುಮಾನ- 5,023 ಮತ್ತು ವಿನಾಯಕ ಟ್ರೋಫಿ, ದ್ವಿತೀಯ ಬಹುಮಾನ – 3,023 ಮತ್ತು ವಿನಾಯಕ ಟ್ರೋಫಿ, ತೃತೀಯ ಬಹುಮಾನ – 4,023 ಮತ್ತು ವಿನಾಯಕ ಟ್ರೋಫಿ, ಚತುರ್ಥ ಬಹುಮಾನ – 4,023 ಮತ್ತು ವಿನಾಯಕ ಟ್ರೋಫಿ ಹಾಗೂ ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ಬಹುಮಾನ ನೀಡಲಾಗುವುದು.
ಮುಕ್ತ ಪಂದ್ಯಾಕೂಟದ ತಂಡದ ಪ್ರವೇಶ ಶುಲ್ಕ 700 ರೂ., ಫೆ.10 ರಂದು ತಂಡದ ಹೆಸರನ್ನು ನೋಂದಾಯಿಸಿಬೇಕು. ಮೊದಲ 25 ತಂಡಗಳಿಗೆ ಮಾತ್ರ ಅವಕಾಶ. ಸಮವಸ್ತ್ರ ಹಾಗೂ ಶೂ ಧರಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ 9480592469, 9483080394 ಅನ್ನು ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..




























