ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣೆಯ ಈಶಾನ್ಯ ಭಾಗದಲ್ಲಿರುವ ನೂರಾರು ವರ್ಷದ ಇತಿಹಾಸವಿರುವ ಅಶ್ವತ್ಥಮರವೊಂದು ನಡುವೆ ಮುರಿತಗೊಂಡಿದ್ದು, ಮುರಿದು ಬಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯಚರಣೆಯು ನಡೆಯುತ್ತಿದೆ.

ಅರ್ಚಕರು ಹಾಗೂ ಆಡಳಿತ ಮಂಡಳಿಯವರು ಅಶ್ವತ್ಥಕಟ್ಟೆಯ ಬಳಿ ಪ್ರಾರ್ಥಿಸಿದ ನಂತರ ತೆರವು ಕಾರ್ಯಚರಣೆ ಆರಂಭಿಸಲಾಯಿತು.

ಮರದ ಬಳಿಯೇ ವಿದ್ಯುತ್ ಲೈನ್, ಟ್ರಾನ್ಸ್ ಫಾರ್ಮರ್ ಇದ್ದು, ಈ ಹಿನ್ನೆಲೆ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಬಳಿಕ ಮರ ತೆರವು ಕಾರ್ಯಚರಣೆ ಆರಂಭಿಸಲಾಯಿತು.

ಮರದ ನಡು ಮುರಿತಗೊಂಡ ಹಿನ್ನೆಲೆ ಭಾರೀ ಗಾತ್ರದ ಗೆಲ್ಲುಗಳು ಧರೆಗುರುಳಿದ್ದು, ಪಕ್ಕದಲ್ಲೇ ಇದ್ದ ಕೆರೆಯ ದಂಡೆ, ಶ್ರೀ ದೇವರ ಕಟ್ಟೆ, ತುಳಸೀಕಟ್ಟೆ, ವಿದ್ಯುತ್ ಲೈನ್, ಟ್ರಾನ್ಸ್ ಫಾರ್ಮರ್, ನೀರಿನ ಟ್ಯಾಂಕ್, ಕಾರುಗಳು ಇತ್ಯಾದಿಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಇದು ಶ್ರೀ ದೇವರ ಕಾರಣಿಕಕ್ಕೆ ಕೈಗನ್ನಡಿ ಹಿಡಿದಂತಿದೆ ಎಂದು ಭಕ್ತರು ಅಭಿಪ್ರಾಯಿಸುತ್ತಿದ್ದಾರೆ..


































