ಕಠ್ಮಂಡು: 16 ವರ್ಷಗಳ ಹಿಂದೆ ನಡೆದ ಯೇತಿ ಏರ್ಲೈನ್ಸ್ನ ವಿಮಾನ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಪತ್ನಿ, ತಾನೂ ಅಂತಹದ್ದೇ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಹೌದು. ಯೇತಿ ಏರ್ಲೈನ್ಸ್ ಸಹ ಪೈಲಟ್ ಅಂಜು ಖತಿವಾಡ ಭಾನುವಾರ ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟಿದ್ದಾರೆ.
ಮೃತ ಅಂಜು ಖತಿವಾಡ, ಆಕೆಯ ಪತಿ ಯೇತಿ ಏರ್ಲೈನ್ಸ್ ಸಹ ಪೈಲಟ್ ಆಗಿದ್ದರು. ಪತಿ 16 ವರ್ಷಗಳ ಹಿಂದೆ, ಅಂದ್ರೆ 2016ರ ಜೂನ್ 21 ರಂದು ಮೃತಪಟ್ಟಿದ್ದರು. ನೇಪಾಲಗಂಜ್ನಿಂದ ಸುರ್ಖೇತ್ ಮೂಲಕ ಜುಮ್ಲಾಗೆ ತೆರಳುತ್ತಿದ್ದ 9-N AEQ ವಿಮಾನ ಅಪಘಾತಕ್ಕೀಡಾಗಿ 6 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸಾವನ್ನಪಿದ್ದರು. ಅದರಲ್ಲಿ ಅಂಜು ಪತಿಯೂ ಒಬ್ಬರಾಗಿದ್ದರು. ಇದೀಗ ಭಾನುವಾರ (ಜ.15) ನಡೆದ ವಿಮಾನ ಅಪಘಾತದಲ್ಲಿ ಅಂಜು ಸಹ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ, ಅಂಜು ಖತಿವಾಡ ಪೈಲಟ್ ಆಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನೂ ಕೆಲವೇ ಗಂಟೆಗಳು ಬಾಕಿಯಿತ್ತು. ಸದ್ಯ ಹಿರಿಯ ಕ್ಯಾಪ್ಟನ್ ಕೆ.ಸಿ ಕಮಲ್ ಪೈಲಟ್ ಆಗಿ, ಅಂಜು ಸಹ ಪೈಲಟ್ ಆಗಿದ್ದರು. ದುರಾದೃಷ್ಟ ಅದುವೇ ಅವರ ಕೊನೆಯ ಹಾರಾಟವಾಗಿದೆ. ಪೈಲಟ್ ಆಗುವ ಕನಸು ಕನಸಾಗಿಯೇ ಉಳಿದು – ಜೀವ ಅಳಿದು ಹೋಗಿದೆ.
ಈ ಹಿಂದೆ ಅಂಜು ಕೆಲಸ ನಿವರ್ಹಿಸಿದ ನೇಪಾಳದ ಎಲ್ಲ ವಿಮಾನಗಳೂ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿದಿದ್ದವು. 100 ಗಂಟೆ ಯಶಸ್ವಿ ಪ್ರಯಾಣ ಬೆಳೆಸಿ ಪೈಲಟ್ ಆಗೋದ್ರಲ್ಲಿದ್ದರು. ಅವರು ಪೈಲಟ್ ಆಗೋದಕ್ಕೆ ಕೆಲವೇ ಸೆಕೆಂಡುಗಳು ಬಾಕಿಯಿತ್ತು. ಆದ್ರೆ ವಿಧಿ ಆಟ ಬೇರೆಯಾಗಿತ್ತು. ಲ್ಯಾಂಡಿಂಗ್ಗೇ ಕೆಲವೇ ಕ್ಷಣಗಳಿಗೂ ಮುನ್ನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.




























