ಮಂಗಳೂರು : ನಗರದ ಜಪ್ಪಿನ ಮೊಗರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟ್ರಕ್ ಅಪಘಾತಕ್ಕೀಡಾಗಿದೆ.
ಸೋಮವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ತಮಿಳುನಾಡು ನೋಂದಣಿಯ ಲಾರಿ ವೈಟ್ ಸಿಮೆಂಟ್ ಸರಕು ತುಂಬಿಕೊಂಡು ಕೇರಳದತ್ತ ಚಲಿಸುತ್ತಿದ್ದಾಗ ಲಾರಿಯ ಮುಂಭಾಗದ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಮಲೀನ ನೀರು ಶೇಖರಣೆಯಾಗುತ್ತಿದ್ದ ಕೊಳಚೆ ಗುಂಡಿಗೆ ಬಿದ್ದಿದೆ.

ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರ ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಲಾರಿ ಡ್ರೈವರ್ ಸೇರಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು..



























