ಮಂಗಳೂರು: ನಾಗುರಿಯಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಅನೇಕ ರೀತಿಯ ಕಷ್ಟಗಳನ್ನು, ನೋವುಗಳನ್ನು ಅನುಭವಿಸಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರು ಇದೀಗ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ನಾನು ಅವರ ಆರೋಗ್ಯದ ಯೋಗಕ್ಷೇಮವನ್ನು ವಿಚಾರಿಸಿದ್ದೇನೆ. ಸ್ಪೋಟದಿಂದ ಹಾನಿಗೀಡಾದ ಆಟೋ ರಿಕ್ಷಾ ಬದಲಿಗೆ ಶೀಘ್ರದಲ್ಲೇ ನನ್ನ ವೈಯಕ್ತಿಕ ನೆಲೆಯಲ್ಲಿ ಹೊಸ ಆಟೋ ಕೊಡಿಸಲಾಗುವುದು. ಅವರು ಶೀಘ್ರವಾಗಿ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಹಾರೈಸುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ.

ಅವರು ನಾಗುರಿ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.

12 ದಿವಸದ ಒಳಗಡೆ ಅವರಿಗೆ ಹೊಸ ರಿಕ್ಷಾವನ್ನು ನೀಡುವ ಕೆಲಸವನ್ನು ಮಾಡ್ತೀವಿ ಅಂತ ಶಾಸಕರು ಭರವಸೆ ನೀಡಿದರು.


























