ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಭ ಒಕ್ಕೂಟದ ವತಿಯಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ವೀರಕಂಭ ಗ್ರಾಮದ ಮಜಿ ಶಾಲಾ ಮುಂಭಾಗದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರ ಸ್ವಚ್ಛತಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ತಿರುಮಲ ಕುಮಾರ್ ಮಜಿ, ಕಲ್ಲಡ್ಕ ವಲಯ ಜನಜಾಗ್ರತಿ ವೇದಿಕೆ ಸದಸ್ಯರಾದ ವೀರಪ್ಪ ಮೂಲ್ಯ, ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ಮೀನಾಕ್ಷಿ ಸುನಿಲ್, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ,ವೀರಕಂಭ ಒಕ್ಕೂಟದ ಉಪಾಧ್ಯಕ್ಷ ಹರೀಶ್ ಬಂಗೇರ, ಒಕ್ಕೂಟ ಸೇವಾ ಪ್ರತಿನಿಧಿ ರೇವತಿ, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸ್ವ- ಸಹಾಯ ಗುಂಪುಗಳ ಸದಸ್ಯರುಗಳು ಭಾಗವಹಿಸಿದ್ದರು.



























