ಕೊಡಗು: ನಾಂಗಲ ಗ್ರಾಮದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ ತಿಮ್ಮಯ್ಯ, ಯುವತಿ ಮನೆ ಬಳಿಯಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಕೃತ್ಯ ನಡೆದ ದಿನ (ಜ.16) ರಂದು ಕೆರೆಗೆ ಹಾರಿದ್ದು, ಆರೋಪಿಗಾಗಿ ಮೂರು ದಿನಗಳಿಂದ ಶೋಧಕಾರ್ಯ ನಡೆಯುತ್ತಿತ್ತು. ಇಂದು (ಜ.18) ಮೂರು ದಿನಗಳ ಬಳಿಕ ಕೆರೆಯ ಆಳದ ಗಿಡಗಂಟಿಗಳ ಮಧ್ಯೆ ಸಿಲುಕಿದ್ದ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.

ಜನವರಿ 16ರಂದು ರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಬುಟ್ಟಿಯಂಡ ಆರತಿ(24) ಎಂಬ ಯುವತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪಕ್ಕದ ಊರಿನ ತಿಮ್ಮಯ್ಯ ಎಂಬಾತನೆ ಕೊಲೆ ಮಾಡಿದ್ದನು. ಕೃತ್ಯ ಬಳಿಕ ಯುವತಿ ಮನೆ ಬಳಿಯಿರುವ ಕೆರೆಗೆ ಹಾರಿದ್ದನು. ತಿಮ್ಮಯ್ಯನಿಗಾಗಿ ಪೊಲೀಸರು ಮೂರು ದಿನಗಳಿಂದ ಶೋಧಕಾರ್ಯ ನಡೆಸುತ್ತಿದ್ದರು. ಇಂದು ಶವ ಪತ್ತೆಯಾಗಿದೆ. ಈ ಕುರಿತು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..

























