ಪುತ್ತೂರು: ಗ್ರಾಮಾಂತರ ಠಾಣೆಯಲ್ಲಿ 81/19 ರಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ CC No:798/20 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕಡಬ ಕೊಯಿಲ ಕಲಾಯಿ ನಿವಾಸಿ, ಪ್ರಸ್ತುತ ಉಪ್ಪಳ ಕೈಕಂಬದಲ್ಲಿರುವ ಇಬ್ರಾಹಿಂ ಖಲಂದರ್ ಬಂಧಿತ ಆರೋಪಿ.

ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಉದಯರವಿ ಸಲಹೆಯಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹರೀಶ್, ಪ್ರವೀಣ್ ಮತ್ತು ಸಚಿನ್ ರವರು ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಜ.19 ರಂದು ಕೇರಳ ರಾಜ್ಯದ ಕಾಸರಗೋಡಿನ ವಿದ್ಯಾನಗರದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಫೆ.2 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯ ವಿರುದ್ದ ಪುತ್ತೂರು ನಗರ ಠಾಣೆ, ಉಪ್ಪಿನಂಗಡಿ ಠಾಣೆ, ಮೂಡಬಿದ್ರಿ ಠಾಣೆ, ಪಾಂಡೇಶ್ವರ್ ಠಾಣೆ, ಕಡಬ ಠಾಣೆಯಲ್ಲಿ
ವಾರೆಂಟ್ ಜಾರಿಯಲ್ಲಿದೆ..

























