ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಪ್ರಯುಕ್ತ ಪಂಚಶ್ರೀ ಗ್ರೂಪ್(ರಿ.) ರವರ ಯಶಸ್ವಿ 13ನೇ ವರ್ಷದ ಕಲಾ ಕಾಣಿಕೆ ‘ಸ್ಟಾರ್ ನೈಟ್’ ಕಲರ್ ಫುಲ್ ಮ್ಯೂಸಿಕಲ್ ಇವೆಂಟ್ ಕಾರ್ಯಕ್ರಮವು ಜ.22 ರಂದು ಸಂಜೆ 7 ಗಂಟೆಗೆ ಶ್ರೀ ದೇವರ ಜಾತ್ರಾ ಗದ್ದೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸ್ಟಾರ್ ಆಫ್ ಅಟ್ರಾಕ್ಷನ್ ಆಗಿ ಬಿಗ್ ಬಾಸ್ ವಿನ್ನರ್, ಕರಾವಳಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ರವರು ಆಗಮಿಸಲಿದ್ದಾರೆ.
ಖ್ಯಾತ ಗಾಯಕರಾದ ಅಜಯ್ ವಾರಿಯರ್, ಪ್ರಕಾಶ್ ಮಹಾದೇವನ್, ಉಜ್ವಲಾ ಆಚಾರ್ಯ, ರೂಪ ಪ್ರಕಾಶ್, ದಿವ್ಯಾ ರಾಮಚಂದ್ರ ರವರು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದ್ದಾರೆ.
ನೃತ್ಯ ತಂಡಗಳು ವಿವಿಧ ಮನರಂಜನಾ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದು, ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..



























