ಉಡುಪಿ: ವ್ಯಕ್ತಿಯೋರ್ವ ಓಮ್ನಿ ಕಾರಿನ ಒಳಗೆ ಕುಳಿತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರುಟ್ಟುವಿನಲ್ಲಿ ನಡೆದಿದೆ.

ಮುಂಡ್ಕೂರು ಗ್ರಾಮದ ಕೃಷ್ಣ ಸಫಲಿಗ ಆತ್ಮಹತ್ಯೆ ಮಾಡಿಕೊಂಡವರು.
ನಿನ್ನೆ ರಾತ್ರಿ ತಮ್ಮನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ಹಿಂದಿರುಗಿದ ಬಳಿಕ ಈ ಘಟನೆ ನಡೆದಿದೆ.

ಕಾರು ಚಾಲಕ ಕೃಷ್ಣ ಸಫಲಿಗ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ತನ್ನ ಓಮ್ನಿ ಕಾರಿನ ಒಳಗೆ ಕುಳಿತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪತ್ರವನ್ನು ಅಂಟಿಸಲಾಗಿದೆ.
ಕಾರ್ಕಳ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


























