ಮಂಗಳೂರು: ಕೆಲ ತಿಂಗಳುಗಳ ಕಾಲ ಸೈಲೆಂಟ್ ಆಗಿದ್ದ ಮುಸ್ಲಿಂ ಡಿಫೆನ್ಸ್ ಫೋರ್ಸ್ ಗ್ರೂಪ್ ಮತ್ತೆ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಭೀತಿ ಹುಟ್ಟಿಸುವ ಮೂಲಕ ತಮ್ಮ ಚಲನೆಯನ್ನು ತೋರಿಸಿದ್ದಾರೆ.
ಎಂ ಡಿ ಎಫ್ ಗ್ರೂಪ್ ಎಲ್ಲೋ ಲುಡೋ ಆ್ಯಪ್‌ನಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಈ ಗ್ರೂಪ್ ಮುಸ್ಲಿಂ ಯುವತಿಯರನ್ನು ಬ್ಲಾಕ್ ಮೇಲೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಮಾತ್ರವಲ್ಲದೆ, ಯುವತಿಯರ ಪೋಷಕರಿಗೂ ಧಮ್ಕಿ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿಯಂತೆಯೇ, ದುಷ್ಕರ್ಮಿಗಳು ಕೊಲ್ಲಿ ರಾಷ್ಟ್ರದಲ್ಲಿ ಕುಳಿತು ಮಂಗಳೂರಿನ ಕೆಲ ಯುವಕರಿಗೆ ನಿರ್ದೇಶನ ನೀಡುತ್ತಿದ್ದಾರೆ. ಈ ವಿಚಾರ ತಿಳಿದಂತೆ ಮಂಗಳೂರು ಪೊಲೀಸರು ಅವರ ಬೆನ್ನು ಬಿದ್ದಿದ್ದರು. ಆದರೆ ಈ ಹಿನ್ನೆಲೆಯಲ್ಲಿ ಆರೋಪಿಗಳು ಗ್ರೂಪ್ ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದಾರೆ.
ತಾಲಿಬಾನ್ ರೀತಿಯಲ್ಲಿ ಎಂ ಡಿ ಎಫ್ ಗ್ರೂಪ್ ಫತ್ವಾ ಹೊರಡಿಸಿತ್ತು. ಬುರ್ಖಾ, ಹಿಜಾಬ್ ಧರಿಸಿ ಮಾಲ್, ಹೋಟೆಲ್, ಸಾರ್ವಜನಿಕ ಜಾಗದಲ್ಲಿ ಹುಡುಗರೊಂದಿಗೆ ಓಡಾಡುವಂತಿಲ್ಲ ಎಂದು ಫತ್ವಾ ಜಾರಿ ಮಾಡಿತ್ತು.
ಮಂಗಳೂರು ಪೊಲೀಸರು ಎಂಡಿಎಫ್ ಕುರಿತು ತೀವ್ರ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ..

























