ಉಡುಪಿ: ವಿದ್ಯಾರ್ಥಿನಿಯೊಬ್ಬಳು ನಾಯಿ ಜೊತೆ ಆಟವಾಡುತ್ತಾಳೆ ಎಂದು ಕೋಪಿಸಿಕೊಂಡು ನಾಯಿಯನ್ನೇ ಕೊಂದು ವಿಕೃತಿ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್‌ನಲ್ಲಿ ನಡೆದಿದೆ.
ಬಂಟಕಲ್ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ವಾರ್ಡನ್ ಅನ್ನು ರಾಜೇಶ್ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯೊಬ್ಬಳು ನಿತ್ಯ ನಾಯಿ ಜೊತೆ ಆಟವಾಡುತ್ತಿದ್ದಳು. ಇದರಿಂದ ಕೋಪಿಸಿಕೊಂಡ ವಾರ್ಡನ್, ನಾಯಿಯನ್ನು ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ.
ನಾಯಿಗೆ ಮನಬಂದಂತೆ ಥಳಿಸಿ ಸಾಯಿಸಿರುವ ವೀಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ವಾರ್ಡನ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..


























