ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ
ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ.

ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ ಕಾಣಿಸಿಕೊಂಡಿದೆ.
ಸುರಳಿ ಆಕಾರದಲ್ಲಿ ಧೂಳು, ಮುಗಿಲೆತ್ತರಕ್ಕೆ ಚಿಮ್ಮಲು
ಪ್ರಾರಂಭಿಸಿದೆ. ಬಳಿಕ ಸುಳಿಗಾಳಿಯ ಧೂಳಿನ ಜೊತೆಗೆ ಮೈದಾನದಲ್ಲಿದ್ದ ಕಸ ಗಿಡಗಂಟಿಗಳನ್ನೆಲ್ಲಾ ಹೊತ್ತು ಮೇಲೇರಿದೆ. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಇದನ್ನು ನೋಡುತ್ತಾ, ಈ ಅಪರೂಪದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿದ್ದು, ಈ ಭಾಗದಲ್ಲಿ ಈ ಹಿಂದೆಯೂ ಇದೇ ರೀತಿಯ ಸುಳಿಗಾಳಿ ಕಾಣಿಸಿಕೊಂಡಿತ್ತು.
























