ಮಂಗಳೂರು : ತುಳು ಚಿತ್ರರಂಗ, ರಂಗಭೂಮಿಯ ಪ್ರಖ್ಯಾತ ನಟ ಅರವಿಂದ ಬೋಳಾರ್ ಅವರು ಸೋಮವಾರ ಸಂಜೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ ಪಂಪ್ ವೆಲ್ ಬಳಿ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡಿದ್ದು, ಅವರನ್ನು ತತ್ ಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅರವಿಂದ ಬೋಳಾರ್ ರವರ ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ..
























