ಪುತ್ತೂರು: ಕಾರಿನಲ್ಲಿ ಮಹಿಳೆಯೋರ್ವಳನ್ನು ಕರೆದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ಕೇಪು ಮುಳಿಯಾಲದ ಹರಿಪ್ರಸಾದ್ ರವರು ಪಣೋಲಿಬೈಲು ಕ್ಷೇತ್ರದ ಮೊರೆ ಹೋಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸುಧೀರ್ ರವರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ, ಪುಣಚ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ನೀಡಿದ ಸ್ಪಷ್ಟನೆಗೆ ನನ್ನ ಪ್ರತ್ಯುತ್ತರ ಏನೆಂದರೆ ಅವರು ಪಣೋಲಿಬೈಲು ಸತ್ಯದೇವತೆಯ ನಡೆಯಲ್ಲಿ ಸತ್ಯ ವಿಚಾರ ಹೇಳಿ ಬಂದಿದ್ದೇನೆಂದು ಪತ್ರಿಕಾ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿರುವುದನ್ನು ನಾನು ಓದಿರುತ್ತೇನೆ. ಈ ಬಗ್ಗೆ ನನ್ನ ಹೇಳಿಕೆ ಏನೆಂದರೆ ಹರಿಪ್ರಸಾದ್ ಯಾದವ್ ಪಣೋಲಿಬೈಲ್ ಗೆ ಹೋಗುವಾಗ ನನ್ನನ್ನು ಕರೆಯ ಬೇಕಿತ್ತು. ಒಬ್ಬನೇ ಹೋಗಿ ಪ್ರಾರ್ಥನೆ ಮಾಡಿ ಬರುವುದಲ್ಲ , ಅವರು ದಿನಾಂಕ ನಿಗದಿ ಪಡಿಸಲಿ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಅಥವಾ ಶ್ರೀ ಕ್ಷೇತ್ರ ಕಾನತ್ತೂರಿಗೆ ನಾನು ಬರುತ್ತೇನೆ ಎಂದು ಅವರು ಹೇಳಿದ್ದಾರೆ.
ಆ ಎರಡು ಕ್ಷೇತ್ರದ ನಡೆಯಲ್ಲಿ ನಿಂತು ಹೇಳಲಿ, ನನ್ನ ಸಂಸಾರದಲ್ಲಿ ಸುಮಾರು ಒಂದೂವರೆ ವರ್ಷದಿಂದ ಏನೇನು ಮಾಡಿದ್ದಾರೆ, ನನ್ನ ಹೆಂಡತಿಯನ್ನು ನನ್ನಿಂದ ಬೇರ್ಪಡಿಸಿ ನನ್ನ ಹೆಂಡತಿಯನ್ನು ಅನೈತಿಕ ಚಟುವಟಿಕೆಗೆ ಬಳಸಿದ್ದಾರೆ ಎಂದು ಇಂಚಿಂಚು ನಾನು ಅಲ್ಲಿ ಬಂದು ಹೇಳುತ್ತೇನೆ. ಎಲ್ಲಾ ಮಾಧ್ಯಮದವರ ಸಮ್ಮುಖದಲ್ಲೇ ಕ್ಷೇತ್ರದಲ್ಲಿ ಹೇಳುತ್ತೇನೆ. ಹರಿಪ್ರಸಾದ್ ಯಾದವ್ ದಿನಾಂಕ ನಿಗದಿ ಪಡಿಸಲಿ ನಾನು ಬರುತ್ತೇನೆ ಎಂದು ಅವರು ಹೇಳಿದ್ದಾರೆ.
ನನಗೂ ನನ್ನ ಪತ್ನಿಗೂ ವಿಚ್ಚೇದನವಾಗಿಲ್ಲ ಕಾಸರಗೋಡು ಕೋರ್ಟ್ ನಲ್ಲಿ ಮಾಂಟನಾನ್ಸ್ ಕೇಸ್ ಇದೆ. ಇದನ್ನೇ ನೆಪ ಮಾಡಿಕೊಂಡ ಹರಿಪ್ರಸಾದ್ ಯಾದವ್ ನನ್ನ ಪತ್ನಿಯನ್ನು ಸುಮಾರು 1 ವರ್ಷದಿಂದ ಅವರ ಮನೆಯವರಿಗೂ ತಿಳಿಸದೇ ಅವಳನ್ನು ನಂಬಿಸಿ ಪುಸಲಾಯಿಸಿ ಅನೈತಿಕ ಚಟುವಟಿಕೆಗಳಿಗೆ ಬಳಸುತಿದ್ದಾನೆ ಎಂದು ನಾನು ಪುತ್ತೂರು ಡಿವೈಎಸ್ಪಿ ಯವರಿಗೆ ದೂರು ನೀಡಿದ್ದೇನೆ.
ಇಂತಹ ಮನೆಹಾಳು ಕೆಲಸ ಮಾಡುವ , ಇನ್ನೊಬ್ಬರ ಜೀವನದಲ್ಲಿ ಚೆಲ್ಲಾಟವಾಡಿ ತಮ್ಮನ ಹೆಂಡತಿಯನ್ನೇ ವರಿಸಿಕೊಳ್ಳಲು ಸ್ಕೆಚ್ ಹಾಕಿದ ಹರಿಪ್ರಸಾದ್ ಯಾದವ್ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಶಾಸಕ ಸಂಜೀವ ಮಠಂದೂರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರಲ್ಲಿ ಮನವಿ ಮಾಡಿದ್ದೇನೆ ಎಂದು ಸುಧೀರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ..