ನಮ್ಮ ಜನ ಬಿಟ್ಟಿ ಸಿಕ್ರೆ ಏನನ್ನೂ ಬಿಡಲ್ಲ. ಬಸ್ಸು, ಲಾರಿ, ಕಾರು, ಅಷ್ಟೇ ಯಾಕೆ ವಿಮಾನವನ್ನೂ ಹೈಜಾಕ್ ಮಾಡಿರೋದನ್ನ ನಾವು ಕೇಳಿರ್ತೀವಿ. ಆದ್ರೆ ಇಲ್ನೋಡಿ 2 ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್ ಅನ್ನೇ ಖದೀಮರು ಕದ್ದಿದ್ದಾರೆ.

ಬಿಹಾರದ ಸಮಷ್ಠಿಪುರ ಜಿಲ್ಲೆಯ ಲೋಹತ್ ಷುಗರ್ ಮಿಲ್‌ನಿಂದ ಪಂಡೌಲ್ ರೈಲ್ವೆ ನಿಲ್ದಾಣದ ಮಧ್ಯೆ ರೈಲ್ವೆ ಟ್ರ್ಯಾಕ್ ಹಾಕಲಾಗಿತ್ತು. ಕೆಲ ವರ್ಷಗಳಿಂದ ಈ ರೈಲ್ವೆ ಮಾರ್ಗದಲ್ಲಿ ರೈಲುಗಳ ಸಂಚಾರ ನಿಲ್ಲಿಸಲಾಗಿತ್ತು. ಆದ್ರೀಗ ಆ 2 ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್ ಕಳ್ಳತನವಾಗಿದೆ.
2 ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್ ಅನ್ನು ಕಳ್ಳರು ಗುಜರಿಗೆ ಹಾಕಿರೋ ಶಂಕೆ ವ್ಯಕ್ತವಾಗಿದೆ. ಎಫ್‌ಐಆರ್ ದಾಖಲಿಸಿರೋ ರೈಲ್ವೆ ರಕ್ಷಣಾ ಫೋರ್ಸ್ ಇಬ್ಬರು ಸಿಬ್ಬಂದಿಗಳನ್ನ ಅಮಾನತು ಮಾಡಿದೆ. ಕಾಣದಂತೆ ಮಾಯವಾದ ರೈಲ್ವೆ ಟ್ರ್ಯಾಕ್‌ಗಾಗಿ ಹುಡುಕಾಟ ನಡೆಸಿದ್ದಾರೆ..