ಮಂಗಳೂರು: ಕಳೆದ ಶುಕ್ರವಾರ ನಗರದ ಹಂಪನಕಟ್ಟೆಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಸೇಲ್ಸ್‌ಮ್ಯಾನ್ ರಾಘವೇಂದ್ರ ಆಚಾರ್ಯ (55) ರನ್ನು ಹತ್ಯೆ ಮಾಡಿದ ಆರೋಪಿಯ ಪತ್ತೆಗೆ 7 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಆರೋಪಿಯ ಚಹರೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದರೂ ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದರಿಂದ ಪತ್ತೆ ಸವಾಲಾಗಿದ್ದು ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಹಂತಕ ಜ್ಯುವೆಲ್ಲರಿಯಿಂದ ಹೊರಗೆ ಬಂದ ಬಳಿಕ ಎರಡೆರಡು ರಿಕ್ಷಾಗಳಲ್ಲಿ ಹೋಗುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಮೊದಲು ಹಂಪನಕಟ್ಟೆಯಿಂದ ವಲೆನ್ಸಿಯಾದವರೆಗೆ ಒಂದು ರಿಕ್ಷಾದಲ್ಲಿ ಸಾಗಿ, ಆ ಬಳಿಕ ಅಲ್ಲಿ ಇಳಿಯುತ್ತಾನೆ. ಮತ್ತೊಂದು ರಿಕ್ಷಾವನ್ನೇರಿ ಜೆಪ್ಪುವರೆಗೂ ಹೋಗಿದ್ದಾನೆ. ಅಲ್ಲಿ ರಿಕ್ಷಾದಿಂದ ಇಳಿದು ರೈಲ್ವೇ ಹಳಿಯತ್ತ ತೆರಳಿದ್ದಾನೆ.
ರೈಲ್ವೇ ಹಳಿಯಲ್ಲಿ ನಡೆಯುತ್ತಾ ಸಾಗಿರುವ ಮಾಹಿತಿ ಲಭ್ಯವಾಗಿದೆ. ಆ ಬಳಿಕ ಆತ ಎಲ್ಲಿ ಹೋಗಿರುವನೆಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..