ಬೆಂಗಳೂರು: ಶಂಕಿತ ಉಗ್ರನನ್ನು ಐಎಸ್‍ಡಿ ಅಧಿಕಾರಿಗಳು ಬಂಧಿಸಿದ ಘಟನೆ ಬೆಂಗಳೂರಿನ ಧಣೀಸಂದ್ರದಲ್ಲಿ ನಡೆದಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಆರೀಫ್ ಬಂಧಿತ ವ್ಯಕ್ತಿ.
ಶಂಕಿತ ಉಗ್ರ ಆರೀಫ್‍ನನ್ನು ಧಣೀಸಂದ್ರದಲ್ಲಿ ಐಎಸ್‍ಡಿ ಹಾಗೂ ಎನ್‍ಐಎ ಅಧಿಕಾರಿಗಳು ಇಂದು (ಶನಿವಾರ) ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ ಬಂಧಿಸಿದ್ದಾರೆ.
ಐಎಸ್‍ಡಿ ಅಧಿಕಾರಿಗಳು ಆರೀಫ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಶಂಕಿತ ಉಗ್ರ ಆರೀಫ್ ಐಸಿಸ್ ಸಂಪರ್ಕ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಧಣಿಸಂದ್ರದ ಮಂಜುನಾಥ್ ನಗರದಲ್ಲಿ ಆರೀಫ್‌ನನ್ನು ಬಂಧಿಸಲಾಗಿದ್ದು, ಆತನ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.