ಪುತ್ತೂರು: ನಗರ ಸಭಾ ವ್ಯಾಪ್ತಿಯ ಸೂತ್ರಬೆಟ್ಟು ಪರಿಸರದ 6 ಮನೆಗಳಿಗೆ ರಸ್ತೆಯ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದು, ಇನ್ನು ಅವರ ಸಂಕಷ್ಟ ಪರಿಹಾರವಾಗುವ ಮುನ್ಸೂಚನೆ ಸಿಕ್ಕಿದೆ.
ಸೂತ್ರಬೆಟ್ಟು ಪರಿಸರದಲ್ಲಿ ಹದಗೆಟ್ಟಿದ್ದ ರಸ್ತೆಯ ನಿರ್ಮಾಣ ಕಾಮಗಾರಿಗೆ ನಗರಸಭೆ ಮುಂದಾಗಿದ್ದು, ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಜೆಸಿಬಿ ಮುಖಾಂತರ ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿದೆ. ಈ ರಸ್ತೆ ನಿರ್ಮಾಣ ಸ್ಥಳೀಯರ ಹಾಗೂ ಸಾರ್ವಜನಿಕರ ಬಹು ವರುಷಗಳ ಬೇಡಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಅದು ಈಡೇರಿಕೆಯಾಗಲಿದೆ.
ನಗರ ಸಭಾ ಅಧ್ಯಕ್ಷರು ಮತ್ತು ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ರಸ್ತೆ ನಿರ್ಮಾಣದ ಭರವಸೆಯನ್ನು ನೀಡಿದ್ದು, ಅದರಂತೆ ನೂತನ ರಸ್ತೆ ನಿರ್ಮಾಣಕ್ಕೆ ಕಾರ್ಯಾರಂಭ ಪ್ರಾರಂಭವಾಗಿದೆ. ಇನ್ನಾದರೂ ಮಳೆಗಾಲದಲ್ಲಿ ಅನುಭವಿಸುವ ಸಂಕಷ್ಟದಿಂದ ಪರಿಹಾರ ದೊರೆಯಬಹುದು ಎಂಬ ಆಶಯ ಸ್ಥಳೀಯರು, ಸಾರ್ವಜನಿಕರದ್ದಾಗಿದೆ..