ಉಡುಪಿ: ಶಿಕ್ಷಣ ಮತ್ತು ವೈದ್ಯಕೀಯ ವಿಚಾರದ ಹಬ್ ಆಗಿ ದೇಶ ವಿದೇಶದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ್ನಲ್ಲಿ ಸದ್ಯ ಪೊಲೀಸ್ ಇಲಾಖೆ ಡ್ರಗ್ಸ್ ವಿರುದ್ದ ಸಮರ ಸಾರಿದೆ.
ಕಳೆದ ಬಾರಿ ಡ್ರಗ್ಸ್ ವಿಚಾರದಲ್ಲಿ ಸುದ್ದಿಯಾಗಿದ್ದ ಮಣಿಪಾಲದ ಪ್ರತಿಷ್ಠಿತ ಕಾಲೇಜು ಈ ಬಾರಿ ಮತ್ತೆ ಡ್ರಗ್ಸ್ ವಿಚಾರದಲ್ಲಿ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಅಲ್ಲದೆ ಯೂನಿವರ್ಸಿಟಿಗೆ ಡ್ರಗ್ಸ್ ಬರುತ್ತಿದ್ದ ಬಗ್ಗೆ ಹಾಗೂ ಅನೇಕ ಸಂಗತಿಗಳ ಬಗ್ಗೆ ಭಯಾನಕ ಮಾಹಿತಿ ಹೊರ ಬಿದ್ದಿದೆ.
ಉಡುಪಿ ಜಿಲ್ಲೆ ರಾಜ್ಯದಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದ ಜಿಲ್ಲೆಯಾಗಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿರುವ ಜಿಲ್ಲೆ. ಆದರೆ ಇತ್ತೀಚೆಗೆ ವಿವಾದಗಳಿಂದ ಮತ್ತು ಡ್ರಗ್ಸ್ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಲೇ ಬಂದಿದೆ. ಅದರಲ್ಲೂ ಉಡುಪಿಯ ಮಣಿಪಾಲದ ಡ್ರಗ್ಸ್ ವಿಚಾರದಲ್ಲಿ ಶಾಕಿಂಗ್ ಸಂಗತಿಗಳು ಬಯಲಾಗುತ್ತಿವೆ.
ಮಣಿಪಾಲಕ್ಕೆ ರಾಜ್ಯ, ಅಂತರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಹೆಸರಿದೆ ಹಾಗಾಗಿ, ಹೊರರಾಜ್ಯ, ಹೊರ ದೇಶದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಸದ್ಯ ಈ ಬೆಳವಣಿಗೆಯಿಂದಾಗಿ ಬಹುತೇಕ ಹೊರಗಡೆಯಿಂದ ಬಂದಂತ ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ಬಾರಿ ಇದೇ ರೀತಿಯ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಮಣಿಪಾಲದ ಪ್ರತಿಷ್ಠಿತ ಮಾಹೆ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎನ್ನುವ ಇಲಾಖೆಯ ಬೇಡಿಕೆ ಹಿನ್ನಲೆಯಲ್ಲಿ ಇದೇ ರೀತಿ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ 42 ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಅಮಾನತು ಶಿಕ್ಷೆ ನೀಡಿದೆ.
ಡ್ರಗ್ ಪೆಡ್ಲಿಂಗ್ ಮಾಡ್ತಾ ಇದ್ದ ಅನೇಕ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. ಹಾಗೂ MDMA, LSD, ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಮೆಡಿಕಲ್, ಮ್ಯಾನೇಜ್ಮೆಂಟ್, ಹೋಟೆಲ್ ಮ್ಯಾನೆಜ್‌ಮೆಂಟ್, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತಮ್ಮ ಹಾಸ್ಟೆಲ್ಗಳಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದರು.
ಮಣಿಪಾಲ್ ಹಾಸ್ಟೆಲ್ ರೂಂನಲ್ಲಿ ರಾಶಿ ರಾಶಿ ಕಾಂಡೋಮ್
ಡ್ರಗ್ ರೈಡ್ ಮಾಡಲು ಹೋದ ಉಡುಪಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಮಣಿಪಾಲ್ ಹಾಸ್ಟೆಲ್ನ ರೂಂಗಳಲ್ಲಿ ರಾಶಿ ರಾಶಿ ಕಾಂಡೋಮ್ಗಳು ಪತ್ತೆಯಾಗಿವೆ. ಮತ್ತಿನ ನಶೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಕಾಮದಾಟ ನಡೆಯುತ್ತಿದ್ದದ್ದು ಬಯಲಾಗಿದೆ. ಯುವಕ-ಯುವತಿಯರು ಒಟ್ಟಿಗೆ ಗಾಂಜಾ ಸೇದುತ್ತಿದ್ದರು. ಯುವಕರು ತಮ್ಮ ಗರ್ಲ್ ಫ್ರೆಂಡ್ಸ್ಗಳಿಗೆ ಡ್ರಗ್ಸ್ ತಂದುಕೊಟ್ಟು ಬಳಿಕ ಸೆಕ್ಸ್ ಗೆ ತಳ್ಳಿ ಅದನ್ನೆ ರೂಢಿಯಾಗಿಸಿಕೊಂಡಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ.
ಇನ್ನು ಮಣಿಪಾಲ್ಗೆ ಮಂಗಳೂರು, ಕೇರಳ, ಗೋವಾದಿಂದ ಡ್ರಗ್ಸ್ ಬರ್ತಾಯಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಂಧೆಕೋರರು ಪೆಡ್ಲರ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೆ ಮಾಡುತ್ತಿದ್ದರು. ಅಲ್ಲದೆ ಕೆಲ ವಿದ್ಯಾರ್ಥಿಗಳು ಗೋವಾಕ್ಕೆ ಪ್ರತಿ ವೀಕೆಂಡ್ ಹೋಗಿ ಡ್ರಗ್ಸ್ ತರುತ್ತಿದ್ದರು.
ಸದ್ಯ ಈ ಮಾದಕ ಜಾಲದ ಸಂಬಂಧ ಮಾತನಾಡಿರುವ ಎಸ್ಪಿ ಅಕ್ಷಯ್, ಮಣಿಪಾಲದಲ್ಲಿ ಡ್ರಗ್ ಜಾಲ ಸಾಕಷ್ಟು ವ್ಯಾಪಿಸಿತ್ತು. ಡ್ರಗ್ ಮುಕ್ತ ಮಣಿಪಾಲ ಮಾಡಲು ಮಾಹೆ ಯೂನಿವರ್ಸಿಟಿ ಕೂಡ ಸಹಕಾರ ನೀಡಿದೆ ಎಂದರು.