ವಿಟ್ಲ: ಜಾನುವಾರುಗಳನ್ನು ಕಳವುಗೈದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ವಿಟ್ಲ ಕಂಬಳಬೆಟ್ಟು ಮಸೀದಿ ಬಳಿ ನಡೆದಿದ್ದು, ಆರೋಪಿಗಳು ಜಾನುವಾರುಗಳನ್ನು ಕಳವುಗೈದು ತಂದ ಮನೆಗೆ ಹಿಂದೂ ಜಾಗರಣ ವೇದಿಕೆ ಪ್ರಮುಖರು ಭೇಟಿ ನೀಡಿದರು.
ಗೋ ಕಳ್ಳರ ಮೂಲಕ ಗೋವುಗಳನ್ನು ಕಳೆದುಕೊಂಡ ದಾಮೋದರ್ ರವರ ಮನೆಗೆ ಹಿಂದೂ ಜಾಗರಣ ವೇದಿಕೆ ಪ್ರಮುಖರು ಭೇಟಿ ನೀಡಿದ್ದು, ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಸುಮಾರು 50 ಸಾವಿರ ರೂ. ಮೌಲ್ಯದ ಹಾಲು ಕರೆಯುವ ದನ ಹಾಗೂ 25 ಸಾವಿರ ರೂ. ಮೌಲ್ಯದ ಕರು ಹಾಕದ ದನವನ್ನು ಈ ಕುಟುಂಬ ಕಳೆದುಕೊಂಡಿದ್ದು, ಈ ಭಾಗದ ಕೆಲ ಮನೆಯಿಂದ ಒಟ್ಟು 6 ಜಾನುವಾರುಗಳು ಕಳವಾಗಿದ್ದು, ಮನೆಯವರು ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಈ ಭಾಗದ ಕೆಲವು ಕಡೆಗಳಿಂದ ಮೇಯಲು ಬಿಟ್ಟ ಜಾನುವಾರುಗಳು ಕಾಣೆಯಾಗಿದ್ದು, ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಗೋ ಕಳ್ಳರನ್ನು ಹಿಡಿದು ಅವರಿಗೆ ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಜಾನುವಾರುಗಳನ್ನು ಕಳೆದುಕೊಂಡ ದಾಮೋದರ ರವರ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರವನ್ನು ನೀಡಬೇಕು.
ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ತೀರ್ಮಾನ ಕೈಗೊಳ್ಳಲಿದ್ದು, ಇದಕ್ಕೆ ಇಲಾಖೆಗೆ ಹೊಣೆಯಾಗಿರುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಮುಖರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ, ವಿಟ್ಲ ತಾಲೂಕು ಹಿಂದೂ ಯುವ ವಾಹಿನಿ ಸಹ ಪ್ರಮುಖ್ ನವೀನ್ ಕೋಲ್ಪೆ, ಜಗದೀಶ್ ದೇವಸ್ಯ, ಹಿಮಾಕರ್, ಶರಣ್ ಉಪಸ್ಥಿತರಿದ್ದರು..