ಪುತ್ತೂರು: ಕೋರ್ಟ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಮೇದಿನಿ ಜನಸೇವಾ ಕೇಂದ್ರ’ 6ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.

6ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೇದಿನಿ ಜನಸೇವಾ ಕೇಂದ್ರಕ್ಕೆ ಸಿ ಎಸ್ ಸಿ ಕರ್ನಾಟಕ ಸ್ಟೇಟ್ ಹೆಡ್ ವಿಭಾಸಾ ಕುಮಾರ್, ಪ್ರಾಜೆಕ್ಟ್ ಮ್ಯಾನೇಜರ್ ದಿನಕರರೆಡ್ಡಿ, ಉಡುಪಿ ಜಿಲ್ಲಾ ವ್ಯವಸ್ಥಾಪಕ ನಿತೇಶ್ ಕುಮಾರ್ ಶೆಟ್ಟಿಗಾರ್ ಮತ್ತು ದಕ್ಷಿಣ ಕನ್ನಡ ಸಿ ಎಸ್ ಸಿ ಜಿಲ್ಲಾ ವ್ಯವಸ್ಥಾಪಕರಾದ ಗೋವರ್ಧನ್ ಮತ್ತು ಜಿಲ್ಲಾ ವಿ ಎಲ್ ಸೊಸೈಟಿ ಅಧ್ಯಕ್ಷರಾದ ರೋಹಿತ್ ಕುತ್ತಾರ್ ಮತ್ತು ಕಾರ್ಯದರ್ಶಿಯಾದ ಡಾಕ್ಟರ್ ಅಬೂಬಕರ್ ಆಜಿ ಭೇಟಿ ನೀಡಿದರು.

ಫೆ.17 ರಿಂದ 27ರ ವರೆಗೆ ಗ್ರಾಹಕರಿಗೆ ಉಚಿತವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡ್ (ಅಬಾ ಕಾರ್ಡ್ ) ಹಾಗೂ ಇ-ಶ್ರಮ್ ಕಾರ್ಡ್ ಮಾಡಿಕೊಡಲಾಗುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

