ಪುತ್ತೂರು : ಹೆಚ್ಚುತ್ತಿರುವ ಕೊರೋನಾ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಪರಿಷ್ಕ್ರತ ಮಾರ್ಗ ಸೂಚಿಯಂತೆ ಅಗತ್ಯ ಸೇವೆಗಳ ಹೊರತು ಪಡಿಸಿ ಉಳಿದ ಅಂಗಡಿ ಮಳಿಗೆಗಳನ್ನು ಬಂದ್ ಮಾಡುವಂತೆ ಪುತ್ತೂರು ಸಹಾಯಕ ಕಮೀಷನರ್ ನೇತೃತ್ವದ ನಗರಸಭೆ ಪೌರಾಯುಕ್ತರ ತಂಡ ಮತ್ತೊಂದು ಕಡೆಯಲ್ಲಿ ಪೊಲೀಸರು ಸೂಚನೆ ನೀಡುವ ಕಾರ್ಯಾಚರಣೆ ಆರಂಭಗೊಂಡಿದೆ.
ಪುತ್ತೂರು ಬೊಳುವಾರಿನಿಂದ ಪೊಲೀಸರು ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡುತ್ತಾ ಬರುತ್ತಿದ್ದಂತೆ ಬಸ್‌ನಿಲ್ದಾಣದ ಕಡೆಯಿಂದ ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್, ನಗರಸಭೆ ಪೌರಾಯುಕ್ತೆ ರೂಫಾ ಶೆಟ್ಟಿ ಯವರು ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡುತ್ತಾ ಬಂದರು.