ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು, ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಸಿದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ ರವರಿಗೆ 2023ನೇ ಸಾಲಿನ “ಸಂಗೀತ ಕಲಾನಿಧಿ ರಾಜ್ಯಪ್ರಶಸ್ತಿ ” ನೀಡಿ ಗೌರವಿಸಲಾಯಿತು.
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ, ಸಂಘಟಕ, ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್. ಭೀಮರಾವ್ ವಾಷ್ಠರ್ ರವರು ಪ್ರಶಸ್ತಿ ನೀಡಿ ಗೌರವಿಸಿದರು.

ಪದ್ಮರಾಜ್ ರವರು ಸಂಗೀತ ನಿರ್ದೇಶಕರಾಗಿ, ಫಿಲಂ ಡೈರೆಕ್ಟರ್, ಕಾರ್ಯಕ್ರಮ ನಿರೂಪಕ, ಸಾಹಿತಿ, ಗಾಯಕರಾಗಿ ಹಾಗೂ ಹೊಸ ಕಿರುಚಿತ್ರ “ಕಲಹ ” ದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀ ರಾಗ್ ಮ್ಯೂಸಿಕ್ಸ್ ಪುತ್ತೂರು, ಮಂಗಳೂರು ತಂಡದ ನಿರ್ದೇಶಕರಾಗಿದ್ದಾರೆ.
ಈ ಸಂದರ್ಭದಲ್ಲಿ ಗಾಯಕರಾದ ನವೀನ ಪುತ್ತೂರು, ಚಂದ್ರಶೇಖರ್ ಹೆಗ್ಡೆ ಪುತ್ತೂರು, ವಸಂತ್ ಬಾರಡ್ಕ ಹಾಗೂ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಇನ್ನಿತರರು ಉಪಸ್ಥಿತರಿದ್ದರು.