ಪುತ್ತೂರು: ತಾಲೂಕಿನ ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್ 4ರ ಸದಸ್ಯರೋರ್ವರ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 171 ಮತಗಳ ಅಂತರದಲ್ಲಿ
ಜಯಗಳಿಸಿದ್ದು, ಈ ಬಗ್ಗೆ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರತಿಕ್ರಿಯಿಸಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ಭರ್ಜರಿ ಜಯ ಗಳಿಸಿದ್ದು, ಮುಂದಿನ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದಿದ್ದಾರೆ.
ಈ ಗೆಲುವು ಪುತ್ತೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಂಜೀವ ಮಠಂದೂರು ರವರ ಅಭಿವೃದ್ಧಿಗೆ ದೊರೆತ ಜಯವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಆರ್ಯಾಪು ವಾರ್ಡ್ 4ರ ಸದಸ್ಯ ಗಿರೀಶ್ ಮರಿಕೆಯವರ
ಮರಣದಿಂದ ತೆರವಾದ ಸ್ಥಾನಕ್ಕೆ ಫೆ.25 ರಂದು ಮತದಾನ
ಪ್ರಕ್ರಿಯೆಗಳು ನಡೆದಿದ್ದು, ಇಂದು ಮತ ಏಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಗೊಂಡಿದೆ.
ವಾರ್ಡ್ 4ರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ದೇವ ರವರು 498 ಮತಗಳನ್ನು ಪಡೆದು, 327 ಮತಗಳನ್ನು ಪಡೆದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೊಟ್ಲ ರವರ ವಿರುದ್ಧ ಮತಗಳ 171 ಅಂತರದಿಂದ ಜಯಗಳಿಸಿದ್ದಾರೆ. 11
ಮತಗಳು ತಿರಸ್ಕೃತಗೊಂಡಿದೆ.