ಕಡಬ: ಕೇನ್ಯ ಗ್ರಾಮದ ಸರ್ವೇ ನಂಬರ್ 37 / 2ಬಿಯಲ್ಲಿ ಇರುವ 4:43 ಎಕ್ರೆ ಸ್ಥಳವನ್ನು ಇತರರು ಅಕ್ರಮಿಸಿದ್ದು, ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಹಾಗೂ ಇತರ ದಲಿತಪರ ಸಂಘಟನೆಗಳ ಸಹಯೋಗದೊಂದಿಗೆ ತಾಲೂಕು ಕಛೇರಿ ಮುಂಭಾಗ ಧರಣಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಯು.ಕೆ ಗಿರೀಶ್ ಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಆನಂದ ಬೆಳ್ಳಾರೆ, ದಲಿತ ಮುಖಂಡರಾದ ಅಚ್ಚುತ ಮಲ್ಕಜೆ, ತಾಲೂಕು ಸಂಚಾಲಕರಾದ ವಸಂತ ಕುಬ್ಲಡಿ, ಸಂಘಟನೆಯ ಹಿರಿಯ ಮುಖಂಡರಾದ ತನಿಯಪ್ಪ ಕಡಬ, ಶಶಿಧರ ಬೋಟ್ಟಡಕ್ಕ, ಅಭಿಷೇಕ್ ಬೆಳ್ಳಿಪಾಡಿ, ಗುರುವಪ್ಪಾ ಕಲ್ಲುಗುಡ್ಡೆ, ಕಮಲಾಕ್ಷ ಎಡಮಂಗಳ, ವಿಶ್ವನಾಥ ಅಲೆಕ್ಕಾಡಿ, ಕೇಶವ ಪಡೀಲ್, ಬಾಬು ಕನಕಮಜಲು, ಹರೀಶ್ ಶೇಖಮಲೆ, ನಾರಾಯಣ ಶೇಖಮಲೆ, ಸತೀಶ ಶೇಖಮಲೆ, ಸಂತೋಷ, ಲೋಕೇಶ, ಕೇಶವ ಶೇಖಮಲೆ, ಗಿರೀಶ ಕುಟ್ರುಪಾಡಿ ಹಾಗೂ ಮಹಿಳಾ ಕಾರ್ಯರ್ತರು ಭಾಗವಹಿಸಿದ್ದರು.

ಕಡಬ ತಹಶೀಲ್ದಾರ್ ರಮೇಶ್ ಬಾಬು ರವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾ.3 ರಂದು ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಅಚ್ಚುತ ಮಲ್ಕಜೆ ನಿರೂಪಿಸಿ, ವಸಂತ ಕುಬ್ಲಡಿ ವಂದನಾರ್ಪಣೆಗೈದರು.


