ಪುತ್ತೂರು: ನಗರ ಪೊಲೀಸ್ ಠಾಣಾ ಅಕ್ರ ನಂ. 65/2018 u/s 143,283 r/w 149 ಐಪಿಸಿ (ನ್ಯಾಯಲಯದ ಸಿ ಸಿ ನಂಬರ್ 3579/2018) ಪ್ರಕರಣದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಕೂರ್ನಡ್ಕ ನಿವಾಸಿ ಸುಲೈಮಾನ್ ಎಂಬವರ ಪುತ್ರ ಉಮ್ಮರ್ ಕೂರ್ನಡ್ಕ ಬಂಧಿತ ಆರೋಪಿ.

ಮಾ.2 ರಂದು ಪುತ್ತೂರು ಠಾಣಾ ಪೊಲೀಸ್ ನೀರಿಕ್ಷಕರು ಮತ್ತು ಉಪ ನೀರಿಕ್ಷಕರ ಮಾರ್ಗದರ್ಶನದಲ್ಲಿ, ಹೆಚ್.ಸಿ ಪರಮೇಶ್, ಹೆಚ್.ಸಿ ಸ್ಕರಿಯ, ಪಿ.ಸಿ. ಪಾಟೀಲ್ ರವರು ಕೂರ್ನಡ್ಕದಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಬಾಂಡ್ ಹಣ ಕಟ್ಟಿದ ನಂತರ ಆರೋಪಿಗೆ ಹೊಸ ಜಾಮೀನಲ್ಲಿ ಬೆಲ್ ನೀಡಲಾಗಿದೆ.
ಈತನ ವಿರುದ್ಧ ಪ್ರಿನ್ಸಿಪಾಲ ಸಿವಿಲ್ ಜಡ್ಜ್ ಪುತ್ತೂರು ಇಲ್ಲಿಯ ಸಿ ಸಿ ನಂಬರ್ 91/2019 u/s 138 niact ಕೇಸಿನಲ್ಲಿ ವಾರಂಟ್ ಇದ್ದು ಇದರಲ್ಲಿ ಹಾಜರು ಪಡಿಸಿದಾಗ ಬಾಂಡ್ ಹಣ ಕಟ್ಟಿದ ನಂತರ ಹೊಸ ಜಾಮೀನಿನಲ್ಲಿ ಬೆಲ್ ಆಗಿರುತ್ತದೆ.