ಬಂಟ್ವಾಳ: ಶ್ರೀ ಕಾರಿಂಜ ಕ್ಷೇತ್ರದಲ್ಲಿ ಗಣಿಗಾರಿಕೆ ನಡೆಯುತ್ತಿರುವುದನ್ನು ನಿಷೇಧಿಸಬೇಕೆಂದು ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ, ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಕಳೆದ ಕೆಲ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಗಣಿಗಾರಿಕೆ ನಿಷೇಧ ಕಾನೂನು ಜಾರಿಗೆ ಬರುವ ಕೊನೆಯ ಹಂತದಲ್ಲಿರುವ ವೇಳೆ ಗಣಿಗಾರಿಕೆ ಮಾಡುವ ಕೊರೆ ಮಾಲೀಕರು ಈ ಪ್ರದೇಶದಲ್ಲಿ ಹೊಸ ತರಹದಲ್ಲಿ ಕಲ್ಲುಗಳನ್ನು ಕಟ್ಟು ಮಾಡುವ ಪರ್ಮಿಷನ್ ಪಡೆಯುವ ಯೋಜನೆ ಸದ್ದಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಗಣಿಗಾರಿಕೆ ನಿಷೇಧ ಕಾನೂನು ಜಾರಿಗೆ ಬರುವ ಕೊನೆಯ ಹಂತದಲ್ಲಿರುವ ವೇಳೆ ಗಣಿಗಾರಿಕೆ ಮಾಡುವ ಕೊರೆ ಮಾಲೀಕರು ಸೇರಿ ಈ ಪ್ರದೇಶದಲ್ಲಿ ಹೊಸ ತರಹದಲ್ಲಿ ಕಲ್ಲು ಕಟ್ಟು ಮಾಡುವ ಪರ್ಮಿಷನ್ ಪಡೆಯುವ ಯೋಜನೆ ಸದ್ದಿಲ್ಲದೆ ನಡೆಸುತ್ತಿದ್ದಾರೆ.
ಈ ವಿಚಾರಕ್ಕೆ ಹಲವರ ಬೆಂಬಲವೂ ವ್ಯಕ್ತವಾಗುತ್ತಿದೆ. ಈ ಕಾರಣದಿಂದಾಗಿ ಚುನಾವಣೆ ಹತ್ತಿರ ಬಂದರೂ ಗಣಿಗಾರಿಕಾ ಮುಕ್ತ ಪ್ರದೇಶ ಮಾಡುವ ಯೋಜನೆಗೆ ಸಹಿ ಮಾಡುವ ಗೋಜಿಗೆ ಹೋಗಿಲ್ಲ, ಇದರಿಂದಾಗಿ ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿ ಆಗಲು 15 ದಿವಸ ಇರುವುದರಿಂದ ಅಲ್ಲಿಯ ವರೆಗೆ ಕಾದು ನೋಡಿ, ಒಂದು ವೇಳೆ ಗಣಿಗಾರಿಕಾ ಮುಕ್ತ ಪ್ರದೇಶ ಎಂದು ಕಾರಿಂಜ ಕ್ಷೇತ್ರವನ್ನು ಘೋಷಣೆ ಮಾಡದೆ ಇದ್ದಲ್ಲಿ ಮುಂದಿನ ಹೋರಾಟದ ರೂಪುರೇಷವನ್ನು ನಿಗದಿ ಮಾಡಲು ಬೈಠಕ್ ದಿನಾಂಕವನ್ನು ತಿಳಿಸಲಾಗುವುದು ಎಂದು ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದೆ.


























