ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಎಮ್.ಹೆಚ್ ತುಫೈಲ್ನ್ನು ಎನ್ಐಎ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದು, ವಿಚಾರಣೆ ವೇಳೆ ಸ್ಪೋಟಕ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ. ವಿಚಾರಣೆಯ ಪ್ರಮುಖ ಅಂಶಗಳು ಎನ್ಐಎ ಮೂಲಗಳಿಂದ ಮಾಹಿತಿ ದೊರೆತಿದೆ.
2017 ರ ಜುಲೈ 4 ರಂದು ಆರ್.ಎಸ್.ಎಸ್ ಮುಖಂಡ ಶರತ್ ಮಡಿವಾಳನನ್ನು ಹತ್ಯೆ ಮಾಡಿದ್ದ, ಹತಂಕರಿಗೆ ತುಫೈಲ್ ಆಶ್ರಯ ನೀಡದ್ದನಂತೆ. ಅಲ್ಲದೆ ತುಫೈಲ್ ಕೊಡಗಿನ ಕುಟ್ಟಪ್ಪ, ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈಗ ಸಿಕ್ಕಿ ಬಿದ್ದಿದ್ದಾನೆ.
ತುಫೈಲ್ಗೆ ಪಿಎಫ್ಐನ ಅಂಗ ಸಂಘಟನೆ ಅಸಲ್ಟ್ನಲ್ಲಿ ಹಾರ್ಡ್ ಕೋರ್ ಜವಾಬ್ದಾರಿ ಇದೆ. ಈತ ಅಸಲ್ಟ್ ಗ್ರೂಪ್ನ ಅಲ್ ಇಂಡಿಯಾ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದನು. ಈ ಹಿನ್ನೆಲೆ ಈತ ದೇಶಾದ್ಯಂತ ತಿರುಗಿ ಹಲ್ಲೆ, ಹತ್ಯೆ, ಕತ್ತಿವರಸೆ ಮತ್ತು ಬಂದೂಕು ತರಬೇತಿ ನೀಡುತ್ತಿದ್ದನು. ಅಪರಾಧ ನಡೆಯುವ ಮುನ್ನ, ನಡೆದ ನಂತರ ಮತ್ತು ಬಳಿಕ ಹೇಗೆ ಇರಬೇಕು ಎನ್ನುವುದರ ಕುರಿತು ತರಬೇತಿ ನೀಡುತ್ತಿದ್ದನು ಎನ್ನಲಾಗಿದೆ.
ಆರೋಪಿ ತುಫೈಲ್, ಎನ್ಐಎ ಮೋಸ್ಟ್ ವಾಂಟೆಡ್ ಆಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಕೊಪ್ಪದ ಮನೆಯಲ್ಲಿ ಆಶ್ರಯ ನೀಡಿದ್ದ. ಜೊತೆಗೆ 2016ರ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ ಹಾಗೂ 2012 ರಲ್ಲಿ ನಡೆದಿದ್ದ ವಿಹೆಚ್ಪಿ ಮುಖಂಡ ಗಣೇಶ್ ಹತ್ಯೆ ಯತ್ನ ಪ್ರಕರಣದ ಆರೋಪಿಯೂ ಆಗಿದ್ದಾನೆ. ನಿಷೇಧಿತ ಪಿಎಫ್ಐನ ಹಿಟ್ ಟೀಮ್ನಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸುತ್ತಿದ್ದನು. ಬೇರೆ ಧರ್ಮದ ಮುಖಂಡರನ್ನ ಗುರುತಿಸಿ ಹತ್ಯೆ ಮಾಡುವ ತಂಡವೇ ಈ ಹಿಟ್ ಟೀಮ್. ಹೀಗಾಗಿಯೇ ಎನ್ಐಎ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ತುಫೈಲ್ನ ಸುಳಿವು ನೀಡಿದವರಿಗೆ 5 ಲಕ್ಷ ಘೋಷಣೆ ಮಾಡಿತ್ತು. ಸದ್ಯ ಅರೆಸ್ಟ್ ಆಗಿರುವ ಈತನ ವಿಚಾರಣೆ ತೀವ್ರಗೊಂಡಿದೆ..