ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಮತ್ತು ನೃತ್ಯಗುರು ನಯನಾ ವಿ. ರೈ ದಂಪತಿಗಳ ಪುತ್ರಿ ಆಸ್ತಿಕಾ ರೈ ರವರು ನಿಧನರಾದರು.
ಮಂಗಳೂರಿನಲ್ಲಿ ವಾಸವಿದ್ದ ಅವರು ಆರೋಗ್ಯ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಸಮೀಪದ ಪದಡ್ಕದಲ್ಲಿ ವಿಶ್ವಕಲಾನಿಕೇತನ ಸಂಸ್ಥೆಯನ್ನು ವಿಶ್ವನಾಥ ರೈ ನಡೆಸುತ್ತಿದ್ದರು. ಈ ಸಂಸ್ಥೆ ವರ್ಷಗಳ ಹಿಂದೆ ಪುತ್ತೂರಿನಲ್ಲಿ ಕೆಲಸ ಮಾಡುತ್ತಿತ್ತು. ಕಲಾವಿದರ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ರೈ ವಿಶ್ವಕಲಾನಿಕೇತನದಲ್ಲಿ ಕಲಿತು ನೃತ್ಯ, ಯಕ್ಷಗಾನದಲ್ಲಿ ಪಳಗಿದ್ದರು.
ಆಸ್ತಿಕಾ ರೈ ರವರ ಮಾವ ವಿನೋದ್ ಆಳ್ವ ದಕ್ಷಿಣ ಭಾರತದ ಪ್ರಸಿದ್ಧ ಸಿನಿಮಾ ನಟರಾಗಿ ದಶಕಗಳ ಕಾಲ ಮಿಂಚಿದ್ದರು.
ಕಲಾ ಕುಟುಂಬದಲ್ಲಿ ಜನಿಸಿದ ಇವರು ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ ಕಲಾವಿದೆಯಾಗಿಯೂ ಬಹರೈನ್ ದೇಶದಲ್ಲಿ ಸುದೀರ್ಘ ಕಾಲ ಕಲಾಸರಸ್ವತಿಯನ್ನು ಆರಾಧಿಸುತ್ತಾ ಬಂದು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.
ಬಹುಮುಖ ಪ್ರತಿಭೆ ಆಸ್ತಿಕಾ ಶೆಟ್ಟಿ ರವರ ನಿಧನಕ್ಕೆ ಅನೇಕ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ..