ಪುತ್ತೂರು: ಗುಡ್ಡವೊಂದರಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಶಾರ್ಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದ ಘಟನೆ ದರ್ಬೆ ಹರ್ಷ ಶೋ ರೂಮ್ ನ ಹಿಂಭಾಗದಲ್ಲಿ ನಡೆದಿದೆ.

ದರ್ಬೆ ಹರ್ಷ ಶೋ ರೂಮ್ ನ ಹಿಂಭಾಗದಲ್ಲಿನ ಗುಡ್ಡದ ಸಮೀಪವಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ನಿಂದ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಬೆಂಕಿ ಗುಡ್ಡದಲ್ಲಿನ ಹುಲ್ಲುಗಾವಲಿಗೆ ಪಸರಿಸಿದ್ದು, ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ..
