ಬಂಟ್ವಾಳ: ಕಾರ್ಮೆಲ್ ಕಾಲೇಜಿನಲ್ಲಿ ಮಾ.8 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ .ಲತಾ ಫರ್ನಾಂಡಿಸ್ ಎಸಿ, ಮಹಿಳಾ ಸಂಘದ ಸಂಯೋಜಕಿಯಾದ ಸುಪ್ರೀತ ಹಾಗೂ ಸುಚಿಕ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಮಹಿಳಾ ದಿನಾಚರಣೆಯ ಕುರಿತಾದ ಮಹತ್ವವನ್ನು ಮಹಿಳೆ ಇತಿಹಾಸಕಾಲದಿಂದಲೂ ಇಂದಿನವರೆಗೂ ಮಹಿಳೆ ನಡೆದು ಬಂದ ಹಾದಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ , ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸವುದು ಅಸಾಧ್ಯ ಹೆಣ್ಣು ಒಂದು ಶಕ್ತಿ ಆಕೆಯನ್ನು ಗೌರವಿಸಬೇಕು. ಈ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಬದುಕಿ ಉದ್ದಕ್ಕೂ ನಾವು ಪ್ರತಿಯೊಂದು ಹೆಣ್ಣನ್ನು ಗೌರವಿಸಬೇಕು ಎಂದು ತಿಳಿಸಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಅನೇಕ ಚಟುವಟಿಕೆಗಳನ್ನು ಹಾಗೂ ಮಹಿಳಾ ಸಬಲೀಕರಣದ ಕುರಿತಾದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಅನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಷ್ಫಿಯ ನಿರೂಪಿಸಿದರು. ನಸಿಯ ನಿಶಾ ಮಹಿಳಾ ದಿನಾಚರಣೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಹಾಗೂ ಪ್ರೇಕ್ಷಾ ಶೆಟ್ಟಿ ವಂದಿಸಿದರು.