ಚುನಾವಣಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಲವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ಕೈಗೊಂಡು ಅಪರಾಧ ಪ್ರವೃತ್ತಿವುಳ್ಳ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ 11 ಜನರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾ.6 ರಿಂದ ಸೆ.6ರ ವರೆಗೆ ಗಡಿಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಗಡಿಪಾರಿಗೊಳಗಾದ 11 ಮಂದಿಯ ವಿವರ..:
ಬಂಟ್ವಾಳ ನಗರ – ಬಂಟ್ವಾಳ ಗೋಳ್ತಮಜಲು ಮಾಣಿಮಜಲು ನಿವಾಸಿ ನಜೀರ್ ಕುಣಿಗಲ್, ಬಾಳ್ತಿಲ ಕುರ್ಮಾನು ನಿವಾಸಿ ಇಬ್ರಾಹಿಂ ಖಲೀಲ್.
ಪುತ್ತೂರು ಗ್ರಾಮಾಂತರ : ಪುತ್ತೂರು ತಾಲೂಕು ಬಡಗನ್ನೂರು ಅನಿಲೆ ನಿವಾಸಿ ಜಯರಾಜ್ ರೈ (ಜಯರಾಜ್ ಶೆಟ್ಟಿ )
ಪುತ್ತೂರು ನಗರ : ಪುತ್ತೂರು ತಾಲೂಕು ಕಬಕ ಗ್ರಾಮ ನೆಹರೂ ನಗರ ನಿವಾಸಿ ಇಬ್ರಾಹಿಂ (ಇಬ್ಬಿ), ಪುತ್ತೂರು ತಾಲೂಕು ಕೆಮ್ಮಿಂಜೆ ಕೂರ್ನಡ್ಕ ನಿವಾಸಿ ಹಕೀಂ ಕೂರ್ನಡ್ಕ
ಬೆಳ್ಳಾರೆ : ಕಡಬ ತಾಲೂಕು ಕುದ್ಮಾರು ಬರೆಪ್ಪಾಡಿ (ಕೂವೆತ್ತೋಡಿ) ನಿವಾಸಿ ರೋಷನ್, ಕಡಬ ತಾಲೂಕು ಸವಣೂರು ಇಡ್ಯಾಡಿ ನಿವಾಸಿ ಪ್ರಸಾದ್
ಉಪ್ಪಿನಂಗಡಿ : ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಕರವೇಲು ನಿವಾಸಿ ಅಬೂಬಕ್ಕರ್ ಸಿದ್ಧಿಕ್, ಪುತ್ತೂರು ತಾಲೂಕು ಉಪ್ಪಿನಂಗಡಿ ಸಿಪಿಸಿ ಕಂಪೌಂಡ್ ನಿವಾಸಿ ಉಬೈದ್ ಬಿ.ಎಸ್, ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಬೋವುಮಜಲು ನಿವಾಸಿ ತಸ್ಲೀಮ್
ಧರ್ಮಸ್ಥಳ : ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮ ದೇವಸಕೊಳಕೆ ಬೈಲು ನಿವಾಸಿ ಕಿರಣ್ ಕುಮಾರ್ ಡಿ. ರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ..
