ವಿಟ್ಲ: ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸುತ್ತಿದ್ದು, ವಿಟ್ಲದ ಗಡಿಭಾಗಗಳಲ್ಲಿ ತಪಾಸಣೆ ಪ್ರಾರಂಭಿಸಿದ್ದಾರೆ.

ವಿಟ್ಲದ ಸಾರಡ್ಕ, ಸಾಲೆತ್ತೂರು, ನೆಲ್ಲಿಕಟ್ಟೆ ಹಾಗೂ ಹಲವು ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ.

ಕೇರಳ ಕಡೆಯಿಂದ ಬರುವ ವಾಹನಗಳನ್ನು ಹಾಗೂ ಕರ್ನಾಟಕದಿಂದ ತೆರಳುವ ವಾಹನಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

2023ರ ಚುನಾವಣೆ ಸಮೀಪಿಸುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆಗಳಿವೆ.
