ಉಪ್ಪಿನಂಗಡಿ: ಸುಮಾರು 52 ವರುಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿ ಸೇವೆ ಸಲ್ಲಿಸಿದ ಉಪ್ಪಿನಂಗಡಿ ರಥಬೀದಿಯ ರಾಮದಾಸ್ ಗುರುಸ್ವಾಮಿ ರವರು ಇಂದು ನಿಧನರಾದರು.

ರಾಮದಾಸ್ ಗುರುಸ್ವಾಮಿ ರವರು ಸತತ 52 ವರುಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ಸ್ವಾಮಿಗಳಿಗೆ ಅಯ್ಯಪ್ಪ ಮಾಲೆಯನ್ನು ಹಾಕಿ ಶಬರಿಮಲೆ ಯಾತ್ರೆಯನ್ನು ಮಾಡಿಸಿರುತ್ತಾರೆ.
ಇವರ ನಿಧನಕ್ಕೆ ಉಪ್ಪಿನಂಗಡಿ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸಂತಾಪ ಸೂಚಿಸಿದೆ.