ವಿಟ್ಲ: ಪುಣಚ ಗ್ರಾಮದ ಅಜ್ಜಿನಡ್ಕ ರಸ್ತೆಯ ಒಳಭಾಗದಲ್ಲಿ ಹೋಗುವ ಪಟಿಕಲ್ಲು ನಾರಾಯಣ ಪೂಜಾರಿ ಎಂಬವರ ಖಾಸಗಿ ಜಾಗದಲ್ಲಿ ವಿದ್ಯುತ್ ಶಾರ್ಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಈ ಬಗ್ಗೆ ತಿಳಿದ ತಕ್ಷಣ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

