ವಿಟ್ಲ: ಬೈಕ್ ಸವಾರರೋರ್ವರು ಕಿರು ಸೇತುವೆ ಮೇಲಿಂದ ಬಿದ್ದು, ಗಾಯಗೊಂಡ ಘಟನೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು-ನೂಜಿ-ಅಮೈ ಸಂಪರ್ಕ ರಸ್ತೆ ಕುಂಡಡ್ಕ ಕಿರುಸೇತುವೆ ಬಳಿ ನಡೆದಿದೆ.
ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು-ನೂಜಿ-ಅಮೈ ಸಂಪರ್ಕ ರಸ್ತೆ ಕುಂಡಡ್ಕ ಕಿರುಸೇತುವೆ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದ್ದು, ಬೈಕ್ ಸವಾರರೋರ್ವರು ಕಿರು ಸೇತುವೆಯಿಂದ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದಾರೆ.
ಇತ್ತೀಚಿಗೆ ಆನ್ ಲೈನ್ ಡೆಲಿವರಿ ಯುವಕನೋರ್ವ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕಿರು ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಪ್ರಾಣಾಪಾಯ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಿರುಸೇತುವೆ ಬಹಳ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಅಸಮರ್ಪಕವಾಗಿದೆ. ಕಿರು ಸೇತುವೆಯಿಂದ ಆಗುವ ಅನಾಹುತಗಳ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.