ಪುತ್ತೂರು: ಪರವಾನಿಗೆ ಇಲ್ಲದೇ ಅಕ್ರಮವಾಗಿ ವ್ಯಕ್ತಿಯೋರ್ವ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ ನಡೆದಿದೆ.
ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಯಜ್ಞತ ರೈ (55) ಬಂಧಿತ ಆರೋಪಿ.
ಮಾ.13 ರಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀನಾಥ್ ರೆಡ್ಡಿ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಯಜ್ಞತ ರೈ ಎಂಬಾತ ಆತನ ಮನೆಯ ಬಳಿಯ ಗುಡ್ಡದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಸದ್ರಿ ಆರೋಪಿಯು ತಪ್ಪೊಪ್ಪಿಕೊಂಡಿದ್ದು, ಬಳಿಕ ಸದ್ರಿ ಯಜ್ಞಾತ ರೈಯು ಹಾಜರುಪಡಿಸಿದ ಪ್ಲಾಸ್ಟಿಕ್ ಗೋಣಿಚೀಲದೊಳಗಿದ್ದ ಮದ್ಯದ ಪ್ಯಾಕೆಟನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಅದರೊಳಗೆ SARVADAS MYSORE LANCER Whisky ಎಂದು ಮುದ್ರಿಸಿರುವ ತಲಾ 90 ML ಮದ್ಯ ತುಂಬಿದ ಪ್ಯಾಕೇಟ್‌ಗಳು ಒಟ್ಟು 50 ಇದ್ದು, ಸದ್ರಿ ಪ್ಯಾಕೆಟ್‌ಗಳಲ್ಲಿ ತುಂಬಿರುವ ಮದ್ಯದ ಒಟ್ಟು ಪ್ರಮಾಣ 4.500 ಲೀಟರ್ ಆಗಿದ್ದು, ತಲಾ ರೂಪಾಯಿ 35.00 ರಂತೆ 50 ಮದ್ಯದ ಪ್ಯಾಕೆಟ್‌ಗಳ ಒಟ್ಟು ಮೌಲ್ಯ ರೂಪಾಯಿ 1750.00 ಆಗಿರುತ್ತದೆ. ಮದ್ಯ ತುಂಬಿರುವ ಸದ್ರಿ 50 ಪ್ಯಾಕೆಟ್‌ಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಿಳಿ ಬಟ್ಟೆಯಿಂದ ಪ್ಯಾಕ್ ಮಾಡಿ SHO ಅರಗು ಸೀಲು ಹಾಕಿ ಪಂಚರ, ಆರೋಪಿಯ ಹಾಗೂ ಪೊಲೀಸ್ ಉಪ-ನಿರೀಕ್ಷಕರ ಸಹಿ ಇರುವ ಚೀಟಿಯನ್ನು ಅಂಟಿಸಿ ಕ್ರಮವಾಗಿ “1” ರಿಂದ “50” ರವರೆಗೆ ಪ್ರತ್ಯೇಕ ಪ್ರತ್ಯೇಕವಾಗಿ ಗುರುತು ನೀಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಸದ್ರಿ ಮದ್ಯದ ಪ್ಯಾಕೆಟ್‌ಗಳನ್ನು ತುಂಬಿಸಲು ಬಳಸಿದ್ದ Unicorn Agri Products ಎಂದು ಮುದ್ರಿಸಿರುವ ನೇರಳೆ ಬಣ್ಣದ ಪ್ಲಾಸ್ಟಿಕ್ ಗೋಣಿ ಚೀಲವನ್ನು ಬಿಳಿ ಬಟ್ಟೆಯಿಂದ ಪ್ಯಾಕ್ ಮಾಡಿ ಹೊಲಿದು, SHO ಅರಗು ಸೀಲು ಹಾಕಿ ಪಂಚರ, ಆರೋಪಿಯ ಹಾಗೂ ಪೊಲೀಸ್ ಉಪ-ನಿರೀಕ್ಷಕರ ಸಹಿ ಇರುವ ಚೀಟಿಯನ್ನು ಅಂಟಿಸಿ ಅದಕ್ಕೆ “A” ಗುರುತು ನೀಡಿ ಸ್ವಾಧೀನಪಡಿಸಿಕೊಂಡಿದ್ದು, ಇದು ಯಾವುದೇ ಬೆಲೆ ಬಾಳುವುದಿಲ್ಲ. ಅದೇ ರೀತಿ ಸದ್ರಿ ಯಜ್ಞಾತ ರೈಯು ಈ ದಿನ ಮದ್ಯ ಮಾರಾಟ ಮಾಡಿ ಬಂದ ಹಣ ತನ್ನ ಬಳಿ ಇರುವುದಾಗಿ ತಿಳಿಸಿದ್ದು, ತನ್ನ ಅಂಗಿಯ ಕಿಸೆಯಿಂದ ತೆಗೆದು ಹಾಜರುಪಡಿಸಿದ ನೋಟುಗಳನ್ನು ಪರಿಶೀಲಿಸಲಾಗಿ ಅದರಲ್ಲಿ ತಲಾ 100 ರೂಪಾಯಿಯ 5 ನೋಟುಗಳಂತೆ ಒಟ್ಟು ರೂಪಾಯಿ 500/- ಇರುತ್ತದೆ. ಸದ್ರಿ ನಗದು ಹಣವನ್ನು ಕೂಡಾ ಸ್ವಾಧೀನಪಡಿಸಿಕೊಳ್ಳಲಾಗಿದೆ. ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ತನ್ನ ಬಳಿ ಇಟ್ಟುಕೊಂಡು ಲಾಭ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ ಮಾಡಿ ಅಬಕಾರಿ ಕಾಯ್ದೆಯಡಿ ಅಪರಾಧವೆಸಗಿರುವ ಆರೋಪಿಗೆ ಆತನ ಅಪರಾಧದ ಬಗ್ಗೆ ತಿಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸ್ವಾಧೀನಪಡಿಸಿಕೊಂಡ ಸೊತ್ತುಗಳು ಮತ್ತು ಆರೋಪಿಯನ್ನು ಠಾಣೆಗೆ ಕರೆ ತಂದು ಮಹಜರು ಜೊತೆ ಹಾಜರುಪಡಿಸುತ್ತಿದ್ದು, ಸದ್ರಿ ಆರೋಪಿಯು ಲಾಭ ಗಳಿಸುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ತನ್ನ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಅಬಕಾರಿ ಕಾಯ್ದೆಯಡಿ ಅಪರಾಧವೆಸಗಿರುವುದರಿಂದ ಸದ್ರಿಯವನ ವಿರುದ್ಧ ಕಲಂ;-32, 34,ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.