2022-23 ರ ಸಾಲಿನಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಪುತ್ತೂರಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ರಂಜಿತ್. ಎಸ್ ರವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರರಾಗಿದ್ದು, ಪುದುವೆಟ್ಟು ಮನೆ ಸಾಮೆದಕಲಪು ಬೆಳ್ತಂಗಡಿ ತಾಲೂಕಿನ ನಿವಾಸಿಯಾಗಿರುತ್ತಾರೆ. ವಿನುತಾ ಡಿ.ಯವರು ಎಂಡೆಸಾಗು ಮನೆ ತಿಂಗಳಾಡಿ ಕೆದಂಬಾಡಿ ಪುತ್ತೂರು ತಾಲೂಕಿನ ನಿವಾಸಿ. ಕಲಾವತಿ ಪಿ.ಯವರು ಸಂತ ಜೋಸೆಫ್ ಪ್ರೌಢ ಶಾಲೆ ಸುಳ್ಯದಲ್ಲಿ ಶಿಕ್ಷಕರಾಗಿದ್ದು, ಕಾಂತಮಂಗಳ ಮನೆ ಅಜ್ಜಾವರ ಸುಳ್ಯ ತಾಲೂಕಿನ ನಿವಾಸಿಯಾಗಿದ್ದಾರೆ.
ಹರಿಣಾಕ್ಷಿ ಬಿ ಕೆ. ರವರು ಬಿ. ಸಿ ಎಂ ಹಾಸ್ಟೆಲ್ ಸುಳ್ಯ ಇಲ್ಲಿನ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡಿಯಾಬೈಲ್ ಮನೆ ಉಬರಡ್ಕ ಮಿತ್ತೂರು ಸುಳ್ಯ ತಾಲೂಕಿನ ನಿವಾಸಿಯಾಗಿರುತ್ತಾರೆ. ದೀಪಿಕಾರವರು ವಿದ್ಯಾನಗರ ಮನೆ ಉಜಿರೆ ಬೆಳ್ತಂಗಡಿ ತಾಲೂಕಿನ ನಿವಾಸಿಯಾಗಿದ್ದು ,ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿರುತ್ತಾರೆ.

2021 ನೇ ಸಾಲಿನಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (TET), ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಗಳಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಗಣನೀಯ ಸಾಧನೆಯನ್ನು ಮಾಡಿದ್ದು, ಪ್ರಸ್ತುತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿಯೂ 5 ಅಭ್ಯರ್ಥಿಗಳು ಸರಕಾರಿ ಹುದ್ದೆಯನ್ನು ಪಡೆಯುವ ಮೂಲಕ ವಿದ್ಯಾಮಾತಾ ಅಕಾಡೆಮಿಯ ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ.
“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳಲ್ಲಿ ತರಬೇತಿಯನ್ನು ಪಡೆಯುವ ಮೂಲಕ ತಮ್ಮ ಸೀಮಿತ ಕಾಲಾವಧಿಯಲ್ಲಿ ಖಾಸಗಿ ಉದ್ಯೋಗದ ಜೊತೆ ಉತ್ತಮ ಯೋಜನಾ ಬದ್ಧ ಪೂರ್ವ ತಯಾರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರಕಾರಿ ಹುದ್ದೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಈ ಫಲಿತಾಂಶವೇ ಸಾಕ್ಷಿ “. ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಈ ಸಂಧರ್ಭದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.




























