ಮದುವೆಯ ಈ ಬಂಧ ಅನುರಾಗದ ಅನುಬಂಧˌ ಏಳೇಳು ಜನ್ಮಗಳೂ ತೀರದ ಸಂಬಂಧ ಎಂಬ ಹಾಡಿನಂತೆ ಮದುವೆಯು ಪವಿತ್ರ ಸಂಬಂಧವನ್ನು ಹೊಂದಿದೆ. ಒಂದು ಗಂಡು ಹಾಗೂ ಹೆಣ್ಣು ನಡುವೆ ಪ್ರೀತಿ ಹುಟ್ಟಿಕೊಂಡು, ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಗಾತಿ ಜೊತೆ ಸುಖ ಸಂಸಾರ ನಡೆಸುವುದಾಗಿದೆ.
ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ, ಆಸ್ತಿಗಾಗಿ, ತನ್ನ ಚಟಕ್ಕಾಗಿ ಕೆಲವರು ಮದುವೆ ಆಗುತ್ತಾರೆ. ಹೀಗಾಗಿ ಇಂತಹ ಜೋಡಿಗಳ ಸಂಸಾರ ಮದುವೆಯಾದ ಕೆಲ ದಿನಗಳ ಬಳಿಕ ಮುರಿದು ಬೀಳುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮದುವೆಯಾದ ನವ ಜೋಡಿಗಳು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೇ ಕೋರ್ಟ್ ಮೆಟ್ಟಿಲೇರಿ ತಮ್ಮ ಸಂಸಾರವನ್ನು ನಡೆಸಲು ಆಗದೆ ದೂರ ಉಳಿದು ಬಿಡುತ್ತಾರೆ. ಆದರೇ ಇಡೀ ವಿಶ್ವದಲ್ಲೇ ಎಲ್ಲೂ ಆಗದಂತಹ ವಿಚಿತ್ರ ಘಟನೆಯೊಂದು ನಡೆದು ಹೋಗಿದೆ.
ಅರೇ ಒಂದೇ ಯುವತಿಯ ಜೊತೆ ಮದುವೆ ಮಾಡಿಕೊಂಡು ಜೀವನ ನಡೆಸಲು ಕಷ್ಟವಾಗಿರೋ ಈ ದುನಿಯಾದಲ್ಲಿ ಇಲ್ಲೊಬ್ಬ ಆಸಾಮಿ ಅಗ್ರಿಮೆಂಟ್ ಮೂಲಕ ಇಬ್ಬರ ಹೆಂಡ್ತಿರ ಮುದ್ದಿನ ಗಂಡನಾಗಿದ್ದಾನೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಹೆಂಡತಿಯರು ಒಪ್ಪಂದ ಮಾಡಿಕೊಂಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಹರಿಯಾಣದ ಗುರುಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ 2018ರಲ್ಲಿ ಸೀಮಾ (28) ಎಂಬ ಯುವತಿಯ ಜೊತೆ ಮದುವೆಯಾಗಿದ್ದ. ಬಳಿಕ ದಂಪತಿಗಳು ಅನ್ಯೋನ್ಯವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ದಂಪತಿಗೆ ಒಂದು ಮಗು ಕೂಡ ಇದೆ.
2020ರಲ್ಲಿ ಮಹಾಮಾರಿ ಕೊರೊನಾ ಕಾರಣಕ್ಕೆ, ಕೆಲಸಕ್ಕೆ ಹೆಂಡತಿ ಹಾಗೂ ಮಗು ಅಡ್ಡಿಯುಂಟು ಮಾಡುತ್ತಾರೆ ಎಂದು ತನ್ನ ಹೆಂಡತಿ ಮತ್ತು ಮಗುವನ್ನು ಆಕೆಯ ತವರು ಮನೆಗೆ ಕಳುಹಿಸಿದ್ದ. ಲಾಕ್‌ಡೌನ್ ಮುಂದುವರೆದ ಕಾರಣ ಪತಿಯು ಇನ್ನೋರ್ವ ಯುವತಿ ಜೊತೆ ಅಕ್ರಮವಾಗಿ ಸಂಬಂಧ ಬೆಳೆಸಿದ್ದ. ಬಳಿಕ ಆಕೆಯನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದ. ಈ ವಿಚಾರ ಮೊದಲನೇ ಪತ್ನಿ ಸೀಮಾಗೆ ತಿಳಿದ ಕೂಡಲೇ ಆಕೆಯು ಆಲೋಚನೆ ಮಾಡಿ ತೀರ್ಮಾನಕ್ಕೆ ಬಂದಳು.
ಒಪ್ಪಂದದ ಪ್ರಕಾರ ಪತಿಯು ಒಂದು ವಾರದಲ್ಲಿ ಮೂರು ದಿನ ಮೊದಲನೇ ಹೆಂಡತಿಯ ಜೊತೆ ಸಂಸಾರ ನಡೆಸಬೇಕು. ಇನ್ನು ಎರಡನೇ ಹೆಂಡತಿ ಜೊತೆ ಉಳಿದ ಮೂರು ದಿನಗಳ ಕಾಲ ಸಂಸಾರ ನಡೆಸಬೇಕು. ಉಳಿದ ಒಂದು ದಿನವನ್ನು ಪತಿಗೆ ಬಿಟ್ಟಿದ್ದು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಗುರುಗ್ರಾಮದಲ್ಲಿ ಇಬ್ಬರು ಹೆಂಡತಿಯರಿಗೆ ಎರಡು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳನ್ನು ಸಹ ನೀಡಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.