ಹಲವು ದಿನಗಳಿಂದ ಕಾದ ಕೆಂಡದಂತಾಗಿದ್ದ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಇಂದು ಮಳೆಯಾಗಿದ್ದು, ವಾತಾವರಣ ತುಸು ತಂಪಾಗಿದೆ.
ಕಬಕ, ನೇರಳಕಟ್ಟೆ, ಕೆದಿಲ ಸಹಿತ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಕಾದು ಕೆಂಡದಂತಾಗಿದ್ದ ವಾತಾವರಣ ತಂಪಾಗಿದೆ.

ಪುತ್ತೂರು, ಬಂಟ್ವಾಳ, ಸುಳ್ಯ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಂಭವವಿದೆ.
ಭಾರತೀಯ ಹವಾಮಾನ ಇಲಾಖೆಯು ಹಲವು ತಿಂಗಳ ಬಳಿಕ ಕರಾವಳಿ ಭಾಗದಲ್ಲಿ “ಯೆಲ್ಲೋ ಅಲರ್ಟ್’ ಘೊಷಿಸಿದೆ.

ಮುನ್ಸೂಚನೆಯ ಪ್ರಕಾರ ಮಾ. 15ರಿಂದ 17ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.