ಪುತ್ತೂರು ಅ. ೨೧: ಪುತ್ತೂರಿನ ಹೃದಯ ಭಾಗದಲ್ಲಿರುವ ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರಡಿಯಲ್ಲಿ ಕಾರ್ಯಾಚರಿಸುತ್ತಿರುವ ಧರ್ಮಸ್ಥಳ ಬಿಲ್ಡಿಂಗ್‌ನ ಪ್ರಗತಿ ಸ್ಟಡಿಸೆಂಟರ್‌ನ ಮುಖ್ಯ ಶಾಖೆ ಹಾಗೂ ಪೋಳ್ಯದಲ್ಲಿ ನೂತನವಾಗಿ ನಿರ್ಮಿತಗೊಂಡಿರುವ ಪ್ರಗತಿ ರೆಸಿಡೆನ್ಶಿಯಲ್ ಸ್ಟಡಿ ಸೆಂಟರ್‌ನಲ್ಲಿ ಅ. 21 ರಂದು ನವರಾತ್ರಿಯ ಮೂರು ದಿನಗಳ ಶಾರದೋತ್ಸವದ ಅಂಗವಾಗಿ ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳರವರ ಸಹಕಾರದೊಂದಿಗೆ ಶಾರದಾಮಾತೆಯನ್ನು ಪೀಠಲಂಕೃತಳನ್ನಾಗಿಸಿ, ೧೩ನೇ ವರ್ಷದ ಶಾರದ ಪೂಜೆಯನ್ನು ಅತ್ಯಂತ ವಿಜೃಂಭಣೆಯಿoದ ನೆರವೇರಿಸಲಾಯಿತು.
ಪೂಜಾ ಕಾರ್ಯದಲ್ಲಿ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮೂರು ದಿನಗಳ ಸತತ ಪೂಜೆಗಳು ನಡೆಯಲಿದ್ದು, ಉಪನ್ಯಾಸಕ ವೃಂದ, ಹಾಗೂ ನಿಯಮಿತ ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದು, ದೇವರ ಕೃಪೆಗೆ ಪಾತ್ರರಾಗಲಿದ್ದಾರೆ.