ಪುತ್ತೂರು: ಸೂತ್ರಬೆಟ್ಟುವಿನಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೃಷಿ ನಾಶ ಮಾಡಿದ್ದಾರೆಂದು ಆರೋಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೋಚನಾ ದಿಲೀಪ್ ಶೆಟ್ಟಿ ರವರು ಈ ಬಗ್ಗೆ ಈ ಮೊದಲೇ ತಹಶೀಲ್ದಾರ್ ರವರಿಗೆ ದೂರು ನೀಡಿದ್ದಾರೆನ್ನಲಾಗಿದೆ.
ಉಪ್ಪಿನಂಗಡಿ ಹೋಬಳಿ, ಚಿಕ್ಕಮುಡ್ನೂರು ಗ್ರಾಮದಲ್ಲಿರುವ ಸ.ನಂ. 167/28 ರಲ್ಲಿ 0.95 ಎಕ್ರೆ ಜಾಗವು ಸಂಜೀವ ಶೆಟ್ಟಿ ಎಂಬವರ ಹೆಸರಿನಲ್ಲಿದ್ದು, ಬಳಿಕ ಅವರ ಮಗನ ಹೆಸರಿಗೆ ವರ್ಗಾವಣೆಯಾಗಿದ್ದು, ಅರುಣ್ ರವರು ತಮ್ಮ ಜಾಗವನ್ನು ಅತಿಕ್ರಮಿಸಿರುವುದಾಗಿ ಅವರು ಆರೋಪಿಸಿದ್ದಾರೆ.
ಅರುಣ್ ರವರಿಗೆ ಕೇವಲ 3 ಸೆನ್ಸ್ ಜಾಗವಿದ್ದು, ಅವರ ಮನೆಯ ಅಂಗಳದ ತನಕ ಇರುವ ಜಾಗವು ಕೂಡ ಸುಲೋಚನಾ ರವರದ್ದೇ ಆಗಿದ್ದು, ಅದನ್ನು ಮಾನವೀಯತೆಯಿಂದ ಅವರಿಗೆ ಬಿಟ್ಟು ಕೊಟ್ಟಿರುತ್ತೇವೆ. ಉಳಿದ ಜಾಗಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವೆ.
ತಹಶೀಲ್ದಾರ್ ರವರಿಗೆ ಅರುಣ್ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಸರ್ವೇಯರ್ ನಿಮಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಹೇಳಿ ಗಡಿ ಗುರುತು ನೋಡಿ ತೆರಳಿದ್ದು, ಅದೇ ರೀತಿ ಅರುಣ್ ರವರಿಗೆ ತಹಶೀಲ್ದಾರ್ ರವರಿಂದ ನೋಟೀಸ್ ಕೂಡ ಆಗಿರುತ್ತದೆ. ಈ ವಿಚಾರವಾಗಿ ಕಾನೂನು ರೀತಿಯಾಗಿಯೇ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ…

























