ಪುತ್ತೂರು : ವಿಧಾನ ಸಭಾ ಚುನಾವಣೆ ಹಿನ್ನೆಲೆ ಪುತ್ತೂರಿನಿಂದ ಶಕುಂತಲಾ ಶೆಟ್ಟಿ ಯವರಿಗೆ ಸೀಟ್ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಘಟಕ ಆಗ್ರಹಿಸಿದೆ.
ಮಹಿಳಾ ಕಾಂಗ್ರೆಸ್ ಘಟಕದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ‘ಮಹಿಳೆಯರಿಗೆ ಹೆಚ್ಚಿನ ಅವಕಾಶ, ಒತ್ತು ನೀಡಬೇಕು ಎನ್ನುವುದು ಮಹಿಳಾ ಕಾಂಗ್ರೆಸ್ ನ ಒತ್ತಾಯ ಹಾಗೂ ಬೇಡಿಕೆಯಾಗಿದೆ. ಅದರಲ್ಲೂ ಶಕುಂತಲಾ ಶೆಟ್ಟಿಯವರನ್ನೇ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡ್ಬೇಕು ಎನ್ನುವುದು ಮಹಿಳಾ ಕಾಂಗ್ರೆಸ್ ನ ಆಗ್ರಹವಾಗಿದೆ ಎಂದರು.

ಶಕುಂತಲಾ ಶೆಟ್ಟಿ ಅವರು ಒಬ್ಬ ಅನುಭವಿ ರಾಜಕಾರಣಿ, ಅಷ್ಟು ಮಾತ್ರವಲ್ಲ ಎರಡು ಬಾರಿ ಶಾಸಕರಾಗಿ ಪುತ್ತೂರು ಕ್ಷೇತ್ರದ ಜನರ ಸಮಸ್ಯೆಗಳನ್ನು ಅತೀ ಹತ್ತಿರದಿಂದ ತಿಳಿದವರಾಗಿದ್ದಾರೆ. ಸಾವಿರಾರು ಕೋಟಿ ಅನುದಾನವನ್ನು ತಂದು ಪುತ್ತೂರಿನಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಹಾಗೆಯೇ ಇನ್ನೂ ಮುಂದೆಯೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡ್ಬೇಕು ಅನ್ನುವಂತಹ ಕನಸನ್ನು ಕಂಡವರು.., ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕೆನ್ನುವ ವಿಚಾರ ಅರ್ಧಕ್ಕೆ ನಿಂತಿದೆ ಅದನ್ನೆಲ್ಲಾ ಮುಂದುವರೆಸಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡ್ಬೇಕು ಎನ್ನುವಂತಹ ಕನಸನ್ನು ಕಂಡವರು.
ಕಾಂಗ್ರೆಸ್ ಸಮಿತಿಯು ಈ ಬಾರಿ ಶಕುಂತಲಾ ಶೆಟ್ಟಿಯವರಿಗೆ ಅವಕಾಶವನ್ನು ಕೊಡ್ಬೇಕು.., ಅವರಿಗೆ ಅವಕಾಶ ನೀಡಿದ್ರೆ ಮಹಿಳೆಯರಿಗೆ ಒಂದು ನ್ಯಾಯ ಒದಗಿಸಿ ಕೊಟ್ಟ ಹಾಗೇ ಆಗುತ್ತದೆ ಎನ್ನುವುದು ನಮ್ಮ ಉದ್ದೇಶ. ಅಷ್ಟು ಮಾತ್ರವಲ್ಲ ಅವರು ಕಳೆದ ಐದು ವರ್ಷದಲ್ಲಿ ಪುತ್ತೂರು ಕ್ಷೇತ್ರದ ಮೂಲೆ ಮೂಲೆಯನ್ನು ಸಂಚರಿಸಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ, ಪಕ್ಷ ಸಂಘಟನೆಯನ್ನು ಮಾಡುವಲ್ಲಿ ಹೆಚ್ಚಿನ ಒತ್ತು ನೀಡಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿ ಅವಕಾಶ ನೀಡಬೇಕು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಾಹಿರ ಜುಬೈರ್, ಕೋಶಾಧಿಕಾರಿ ಶುಭಾ ಮಲ್ಲಿ, ನಗರ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ವಿಲ್ಮಾ ಗೊಂಝಾಲ್ವಿಸ್ ಉಪಸ್ಥಿತರಿದ್ದರು.

























