ಪುತ್ತೂರು : ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಅನ್ನು ಜಾರಿಗೊಳಿಸಿತ್ತು. ಈ ನಿಟ್ಟಿನಲ್ಲಿ ಶನಿವಾರ, ಭಾನುವಾರ ಕರ್ಫ್ಯೂ ಇದ್ದ ಹಿನ್ನೆಲೆಯಲ್ಲಿ ಇಂದು ಜನರು ಪೇಟೆಗಳ ಕಡೆ ಮುಖ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಪುತ್ತೂರು ಪೇಟೆಯಲ್ಲಿ ಇಂದು ಸೋಮವಾರ ವಾಹನ ಸಂಚಾರದಲ್ಲಿ ಏರಿಕೆಯಾಗಿದೆ. ಪೇಟೆಯಲ್ಲಿ ಕೆಲ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಿರುವ ಕಾರಣ ಅಗತ್ಯ ಸೇವೆ ಹೊರತು ಪಡಿಸಿ ಮತ್ತೆ ಎಲ್ಲವನ್ನೂ ಗೃಹರಕ್ಷಕ ದಳದ ಕೋವಿಡ್ ಮಾರ್ಷಲ್ ಗಳು ಮತ್ತು ನಗರ ಸಭಾ ಅಧಿಕಾರಿಗಳು ಬಂದ್ ಮಾಡಿಸುತ್ತಿದ್ದಾರೆ.