ಪುತ್ತೂರು : ಕೋರ್ಯ ತರವಾಡು ಮನೆ ಬೆಳ್ಳಿಪ್ಪಾಡಿ, ಕೋಡಿಂಬಾಡಿಯಲ್ಲಿ ಧೂಮಾವತಿ, ಕಲ್ಲುರ್ಟಿ, ಕೊರತ್ತಿ, ಮೈಯ್ಯಂದಿ, ಕಲಾಲ್ದ ಗುಳಿಗ, ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕುಂಟಲ್ದಾಯ ದೈವಗಳ ಧರ್ಮ ನೇಮೋತ್ಸವ ಮಾ.28 ರಿಂದ 29ರ ವರೆಗೆ ನಡೆಯಲಿದೆ.
ಮಾ.28 ರಂದು ಬೆಳಿಗ್ಗೆ ಗಣಪತಿ ಹವನ, ಸ್ಥಳದ ದೈವಗಳಿಗೆ ಪರ್ವ, ಮುಡಿಪು ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಕುಟುಂಬ ದೈವಗಳ ಭಂಡಾರ ತೆಗೆದು ನೇಮೋತ್ಸವ, ಕಲ್ಲುರ್ಟಿ ದೈವದ ಗಗ್ಗರ ಸೇವೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಕೊರತ್ತಿ ಮತ್ತು ಮೈಯ್ಯಂದಿ, ಕಲಾಲ್ದ ಗುಳಿಗ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕುಂಟಲ್ದಾಯ, ಧರ್ಮದೈವ ಧೂಮಾವತಿ ದೈವಗಳ ನೇಮೋತ್ಸವ ಜರುಗಲಿದೆ..

























