ಬಂಟ್ವಾಳ: ಮಾ.26 ರಂದು ವೀರಕಂಭ ಗ್ರಾಮದ ಅರೆಬೆಟ್ಟು, ಆರ್ಲಿದಡಿ ಶ್ರೀ ಅರಸು ಗುಡ್ಡೆಚಾಮುಂಡಿ ಪ್ರಧಾನಿ ಪಂಜುರ್ಲಿ ಬಂಟೆದಿ, ಮಲೆಕೊರತಿ ದೈವಗಳ ದೊಂಪದಬಲಿ ನೇಮೋತ್ಸವ ನಡೆಯಲಿದೆ.
ಮಾ.19 ಆದಿತ್ಯವಾರದಂದು ಗೊನೆ ಮುಹೂರ್ತ ನಡೆದು, 26.03.2023 ನೇ ಸಂಜೆ 5:00ಕ್ಕೆ ಮಾಣಿಗುತ್ತುವಿನಿಂದ ಭಂಡಾರ ಬಂದು, ರಾತ್ರಿ ಗಂಟೆ 11.30ಕ್ಕೆ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ.
ಸಂಜೆ 7 ರಿಂದ ಸ್ಥಳೀಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 9:00ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ..
