ಪುತ್ತೂರು : ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಈ ವೇಳೆ ಕೆರೆಯಲ್ಲಿರುವ ದೇವರ ಕಟ್ಟೆಯ ತಳಭಾಗದಲ್ಲಿರುವ ವರುಣ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದ ಕೆರೆಯಲ್ಲಿರುವ ದೇವರ ಕಟ್ಟೆಯ ತಳಭಾಗದಲ್ಲಿ ವರುಣ ದೇವರ ವಿಗ್ರಹವಿದ್ದು, ಕೆರೆಯಲ್ಲಿ ಸದಾ ನೀರು ತುಂಬಿರುವುದರಿಂದ ಅದು ಭಕ್ತರಿಗೆ ಕಾಣ ಸಿಗುವುದಿಲ್ಲ.
ಅಭಿವೃದ್ಧಿ ಕಾರ್ಯ ಹಿನ್ನೆಲೆ ಕೆರೆಯ ನೀರನ್ನು ಸ್ವಲ್ಪ ಮಟ್ಟಿಗೆ ತೆಗೆಯಲಾಗಿದ್ದು, ಈ ಹಿನ್ನೆಲೆ ಮಂಟಪದ ತಳಭಾಗದಲ್ಲಿರುವ ವರುಣ ದೇವರ ವಿಗ್ರಹವು ಎಲ್ಲರಿಗೂ ಕಾಣ ಸಿಗುತ್ತಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ವಾಸ್ತುಶಿಲ್ಪಿ ಜಗನ್ನಿವಾಸ್ ರಾವ್, ಪ್ರಧಾನ ಅರ್ಚಕ ವಸಂತ ಕೆದಿಲಾಯ ರವರು ವಿಗ್ರಹಕ್ಕೆ ಪೂಜೆ ನೆರವೇರಿಸಿದರು.

ಅದೇ ರೀತಿ ನೂರಾರು ಮಂದಿ ಭಕ್ತರು ಆಗಮಿಸಿ ಬಹಳ ಅಪರೂಪಕ್ಕೆ ಕಾಣ ಸಿಗುತ್ತಿರುವ ವರುಣ ದೇವರ ವಿಗ್ರಹ ಕಣ್ತುಂಬಿಸಿಕೊಳ್ಳುತ್ತಿದ್ದಾರೆ.




























