ವಿಟ್ಲ : ಮಹಿಳೆಯೋರ್ವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಕಟ್ಟಿಗೆ ಸಂಗ್ರಹಿಸಿದ್ದ ಕೊಠಡಿಗೆ ಬೆಂಕಿ ಹಾಕಿದ್ದಾರೆಂದು ಆರೋಪಿಸಿ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಕೆದುಮೂಲೆ ನಿವಾಸಿ ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ರಝಕ್, ಮೂಸೆ ಕಲೀಂ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.26 ರಂದು ಮಹಿಳೆಯ ತಂದೆ ಮಹಮ್ಮದ್ ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಕೆದುಮೂಲೆ ಎಂಬಲ್ಲಿರುವ ನೆರೆವಾಸಿಗಳಾದ ರಝಾಕ್ ಹಾಗೂ ಮೂಸೆ ಕಲಿಂ ರವರು ಮಹಿಳೆಯ ಜಾಗದಲ್ಲಿ ಮೋರಿ ತೆಗೆಯುವುದನ್ನು ಆಕ್ಷೇಪಿಸಿದಕ್ಕೆ ರಝಾಕ್ ಮತ್ತು ಮೂಸೆ ಕಲಿಂ ರವರು ಮಹಿಳೆಯ ತಂದೆಯನ್ನು ದೂಡಿ ಹಾಕಿ ,ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಮಾ.27 ರಂದು ಆರೋಪಿಗಳು ಮಹಿಳೆಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೆಶ ಮಾಡಿ ಮನೆಯ ಕಿಟಕಿಯನ್ನು ಒಡೆದು ಮಹಿಳೆಯನ್ನು ಮತ್ತು ಮನೆಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮನೆಗೆ ತಾಗಿಕೊಂಡಿರುವ ಕಟ್ಟಿಗೆ ಸಂಗ್ರಹಿಸುವ ಕೊಠಡಿಗೆ ಬೆಂಕಿ ಹಚ್ಚಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿದ್ದು, ಈ ಘಟನೆಯಿಂದ ಮಹಿಳೆ ಕಟ್ಟಿಗೆ ಸಂಗ್ರಹಿಸುವ ಕೊಠಡಿ ಸಂಪೂರ್ಣ ಸುಟ್ಟು ಹೋಗಿದ್ದಲ್ಲದೆ ಮನೆಯ ಕಿಟಕಿಯ ಗಾಜು ಪುಡಿಯಾಗಿ ಒಟ್ಟು 25.000/- ರೂ ನಷ್ಟವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕಲಂ: 447,504,506,436.427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
























